ವೇಣೂರು: ಪಡ್ಡoದಡ್ಕ ನೂರುಲ್ ಹುಧಾ ಜುಮ್ಮಾ ಮಸೀದಿಯಲ್ಲಿ ಮೇ 28ರಂದು ಬಕ್ರೀದ್ ಆಚರಿಸಲಾಯಿತು. ಖತೀಬ್ ಸಮೀರ್ ದಾರಿಮಿ ಕುತುಬಾ ಪಾರಾಯಣ ಮಾಡಿ ಈದ್ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಪ್ರಮುಖರಾದ ರಫೀಕ್ ಪಡ್ಡ, ಖಾಲಿದ್ ಪುಲಬೆ, ಮಹಮ್ಮದ್ ಎಚ್ ವೇಣೂರು, ಪಿಜೆ ಮಹಮೂದ್, ಅಬ್ದು ಸಲಾಂ ಶಾಂತಿನಗರ, ಸರಪ್ ತಂಗಲ್, ಇರ್ಫಾನ್ ಯುಕೆ, ನಜೀರ್ ಪೆರಿಂಜೆ, ಅಶ್ರಪ್ ಪಿಎಚ್ ಶಾಂತಿನಗರ, ಅಶ್ರಪ್ ಕಿರೋಡಿ, ಅಶ್ರಫ್ ಗಾಂಧಿನಗರ, ಮೊಹಮ್ಮದ್ ಶಾಫಿ ಕಿರೋಡಿ, ಇಸ್ಮಾಯಿಲ್ ಎಚ್, ಬುಲೆಟ್ ಖಾದರ್ ಪೆರಿಂಜೆ, ಅಕ್ಬರ್ ಪೆರಿಂಜೆ, ಎಸ್ ಕೆ ರಜಾಕ್ ನಾಸಿರ್ ಚಮ್ಮು ಸೇರಿದಂತೆ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.





