ದುಬೈ: ಇಲ್ಲಿ ನಡೆಯುತ್ತಿರುವ ಏರ್ ಶೋನಲ್ಲಿ ಭಾರತೀಯ ಎಚ್ಎಎಲ್ ನಿರ್ಮಿತ ತೇಜಸ್ ವಿಮಾನವೊಂದು ಶುಕ್ರವಾರ ಮಧ್ಯಾಹ್ನ 2:10 ರ ಸುಮಾರಿಗೆ ಅಪಘಾತಕ್ಕೀಡಾಗಿದೆ.
ಸ್ಥಳೀಯ ಸಮಯ ಮಧ್ಯಾಹ್ನ 2:10 ರ ಸುಮಾರಿಗೆ ಪ್ರದರ್ಶನಕ್ಕಾಗಿ ವಿಮಾನವನ್ನು ಹಾರಿಸುತ್ತಿದ್ದಾಗ ಅಪಘಾತವಾಗಿದೆ.
ವಿಮಾನದಲ್ಲಿದ್ದ ಪೈಲಟ್ ಹೊರಗೆ ಹಾರಿದ್ದಾರೆಯೇ ಎಂಬುದು ತತ್ ಕ್ಷಣ ಸ್ಪಷ್ಟವಾಗಿಲ್ಲ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನಸಂದಣಿಯಲ್ಲಿದ್ದವರು ನೋಡನೋಡುತ್ತಿದ್ದಂತೆ ವಿಮಾನ ಪತನವಾಗಿದ್ದು ನಿಲ್ದಾಣದ ಮೇಲೆ ಕಪ್ಪು ಹೊಗೆ ಆವರಿಸಿಕೊಂಡಿದೆ.









