ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಗುರುವಾಯನಕೆರೆ, ನಾರಾವಿ ವಲಯ ಕುತ್ಲೂರು ಎ ಒಕ್ಕೂಟದ ಸದಸ್ಯರಾದ ವನಿತಾ ಇವರ ಪತಿ ಕೃಷ್ಣಪ್ಪ ವಿಶೇಷ ಚೇತನರಿಗೆ ಶ್ರೀ ಕ್ಷೇತ್ರದ ವತಿಯಿಂದ ಜನಮಂಗಲ ಕಾರ್ಯಕ್ರಮದಡಿ ಔಟ್ ಸೈಡ್ ವೀಲ್ ಚೇರನ್ನು ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕಾಂತಬೆಟ್ಟು ಇವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ವಿಶಾಲ ಕೆ., ಶೌರ್ಯ ವಿಪತ್ತು ಘಟಕದ ಸದಸ್ಯರಾದ ಅಣ್ಣಿ ಎಂ.ಕೆ., ಕರಿಯ ಪೂಜಾರಿ, ಸಂತೋಷ್ ಮರ್ದೊಟ್ಟು, ಕೊಕ್ರಾಡಿ-ಸಾವ್ಯ ಸೇವಾ ಪ್ರತಿನಿಧಿ ಶಶಿಧರ್ ಕುಲಾಲ್, ಕುತ್ಲೂರು ಸೇವಾ ಪ್ರತಿನಿಧಿ ಉಷಾ ಉಪಸ್ಥಿತರಿದ್ದರು.









