ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಉಗ್ರರ ಕೈವಾಡದ ಅನುಮಾನ ಬಲವಾಗುತ್ತಿದೆ. ತನಿಖೆ ನಡೆಸುತ್ತಿರುವ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಫರೀದಾಬಾದ್ ನೋಂದಣಿಯ ಹ್ಯುಂಡೈ ಐ20 ಕಾರಿನ ಹಿಂಭಾಗದಲ್ಲಿ ಸ್ಫೋಟವಾಗಿದೆ. ಇಷ್ಟೇ ಅಲ್ಲ ಸ್ಫೋಟಕ ಬಳಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕಾರಿನ ಮಾಲೀಕ ಸಲ್ಮಾನ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕಾರನ್ನು ಮಾರಾಟ ಮಾಡಿರುವುದಾಗಿ ಸಲ್ಮಾನ್ ಹೇಳಿದ್ದಾನೆ. ಇನ್ನು ಕಾರು ದೆಹಲಿಯ ಕೆಂಪುಕೋಟೆ ಬಳಿ ಹೇಗೆ ಬಂತು? ಎಲ್ಲೆಲ್ಲಿ ಸುತ್ತಾಡಿ ಎನ್ನುವುದನ್ನು ಪೊಲಿಸರು ಪತ್ತೆ ಹಚ್ಚಿದ್ದಾರೆ.









