ನಾರಾವಿ: 2026 ಫೆ. 28ರಿಂದ ಮಾರ್ಚ್ 09 ರವರೆಗೆ ನಡೆಯುವ ಇತಿಹಾಸ ಪ್ರಸಿದ್ಧ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಉತ್ಸವದ ಪ್ರಯುಕ್ತ ತುಳುನಾಡಿನ ಕಾರಣಿಕದ ಶ್ರೀ ಕೊಡಮಣಿತ್ತಾಯ ದೈವಕ್ಕೆ ಮರದ ಮಂಚವನ್ನು ನಾರಾವಿ ಡೊಂಕುಬೆಟ್ಟು ಸನ್ನಿಧಿಪ್ಯಾಲೇಸ್ ಶ್ರೀಮತಿ ವೀರಮ್ಮ ಸಂಜೀವ ಸಾಲಿಯಾನ್ ಮತ್ತು ಮಕ್ಕಳು ಭಕ್ತಿಪೂರ್ವಕವಾಗಿ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರವೀಂದ್ರ ಪೂಜಾರಿ ಬಾಂದೊಟ್ಟು, ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ನಾರಾಯಣ ಪೂಜಾರಿ, ಈದು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಸದಾನಂದ ಪೂಜಾರಿ, ದಾನಿಗಳಾದ ವೀರಮ್ಮ ಸಂಜೀವ ಸಾಲಿಯಾನ್, ಮಕ್ಕಳಾದ ಕಲಶ ಸಮಿತಿಯ ಸಂಚಾಲಕ ಸತೀಶ್ ಕೋಟ್ಯಾನ್, ರವಿ ಕೋಟ್ಯಾನ್, ಪ್ರವೀಣ್ ಕೋಟ್ಯಾನ್, ಸ್ವಾಗತ ಸಮಿತಿಯ ಸಂಚಾಲಕ ಯುವವಾಹಿನಿ (ರಿ.) ವೇಣೂರು ಘಟಕದ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್, ಪ್ರಮೀಳ ಕೋಟ್ಯಾನ್ ಮತ್ತು ಸುದರ್ಶನ್ ಶೇರಿಗಾರ್ ಹಟ್ಯಡ್ಕ, ರಾಧಾಕೃಷ್ಣ, ಸದಾನಂದ, ಸದಾಶಿವ ಉಪಸ್ಥಿತರಿದ್ದರು.





