ವೇಣೂರು: ಬಜಿರೆ ಗ್ರಾಮದ ನಿರ್ಪರಿ ಕ್ರಾಸ್ ರೋಡ್ (ನಡ್ಯಟ್ಟ ರಸ್ತೆ) ಕಾಂಕ್ರೀಟೀಕರಣ ಮಾಡಬೇಕೆಂಬ ಬಹುದಿನದ ಬೇಡಿಕೆ ಇಲ್ಲಿನ ನಾಗರಿಕರದ್ದು. ಆ ಭಾಗದ ಪಂಚಾಯತ್ ಸದಸ್ಯರು ಹಾಗೂ ಜಯರಾಜ್ ವಿ.ಎಸ್., ಮತ್ತು ಭಾಸ್ಕರ ಗೌಡ ಅವರು ಜೊತೆಗೂಡಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರಿಗೆ ಮನವಿ ನೀಡಿದರು.
ಶಾಸಕರು ರೂ. 10ಲಕ್ಷ ಅನುದಾನವನ್ನು ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ನೀಡುವುದಾಗಿ ಭರವಸೆ ನೀಡಿದ್ದಾರೆ.









