ಮಂಗಳೂರು/ವೇಣೂರು: ಸಹಕಾರ ಕ್ಷೇತ್ರದಲ್ಲಿ ಸಾಧನೆಯ ಮೈಲುಗಲ್ಲು ಸ್ಥಾಪಿಸಿರುವ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇಂದು ಮಂಗಳೂರಿನಲ್ಲಿ ಉತ್ತಮ ಸಂಘ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಮಂಗಳೂರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಉತ್ಕೃಷ್ಠ ಸಹಕಾರಿ ಸೌಧದಲ್ಲಿ ನಡೆದ 2025-26ನೇ ಸಾಲಿನ ಮಹಾಸಭೆಯಲ್ಲಿ ವೇಣೂರು ಸಹಕಾರಿ ಸಂಘದ ಪಾರದರ್ಶಕ ಆಡಳಿತ ಮತ್ತು ಗ್ರಾಹಕಸ್ನೇಹಿ ಸೇವೆಗಳನ್ನು ಪರಿಗಣಿಸಿ ಉತ್ತಮ ಸಂಘವೆಂದು ಗುರುತಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ನಿರ್ದೇಶಕರುಗಳು ಸೇರಿ ಈ ಪ್ರೋತ್ಸಾಹಕ ಪ್ರಶಸ್ತಿ ಪ್ರದಾನ ಮಾಡಿದರು. ವೇಣೂರು ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿ.ಇ., ಕಾರ್ಯನಿರ್ವಹಣಾಧಿಕಾರಿ ಜಯಂತ್ ಪೂಜಾರಿ ಹಾಗೂ ನಿರ್ದೇಶಕರು ಜೊತೆ ಸೇರಿ ಪ್ರಶಸ್ತಿ ಸ್ವೀಕರಿಸಿದರು.



