

ವೇಣೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ವೇಣೂರು ಘಟಕದ ಸಾಮಾಜಿಕ ಸೇವಾಕಾರ್ಯ ಚಟುವಟಿಕೆಯ ಸಹಾಯಾರ್ಥವಾಗಿ ಕುಡ್ಲ ಚಾ ಪರ್ಕ ಕಲಾವಿದರು ಅಭಿನಯಿಸಿರುವ ಸುಣ್ಣದ ಬೊಟ್ಟು ಎಂಬ ತುಳು ಹಾಸ್ಯಮಯ ನಾಟಕವು ಅ. 24ರಂದು ವೇಣೂರು ಶ್ರೀ ಭರತೇಶ ಸಭಾಭವನದಲ್ಲಿ ಸಂಜೆ 6-30ರಿಂದ ಜರಗಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

