ವೇಣೂರು: ವೇಣೂರು ಹಾಗೂ ಆರಂಬೋಡಿ ಗ್ರಾಮ ಪಂಚಾಯತುಗಳ ಆಡಳಿತ ಅವಧಿಯು ಮುಕ್ತಾಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ವೇಣೂರು ಗ್ರಾಮ ಪಂಚಾಯತ್ಗೆ ಉಜಿರೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿರುವ ಮೋಹನ್ ಕುಮಾರ್ ಹಾಗೂ ಆರಂಬೋಡಿ ಗ್ರಾ.ಪಂ.ಗೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪ್ರಭಾಕರ ಎಸ್. ಅವರನ್ನು ನೇಮಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.




