ವಿಶ್ವ ಖ್ಯಾತಿಯ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂಟ್ವಾಳ ತಾಲೂಕಿನ ಮಾಣಿಲ ಶ್ರೀ ಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ಆಹ್ವಾನ ಬಂದ ಸುಸಂದರ್ಭದಲ್ಲಿ ಶ್ರೀ ಮಾಣಿಲ ಕ್ಷೇತ್ರಕ್ಕೆ ಬೇಟಿ ನೀಡಿ ಅವರನ್ನು ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಬಂಟ್ವಾಳದ ಮಾಜಿ ಬೂಡ ಅಧ್ಯಕ್ಷರಾದ ಸದಾಶಿವ ಬಂಗೇರ, ವಿಟ್ಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಮಾನಾಥ ವಿಟ್ಲ. ಸಜಿಪ ಮುನ್ನೂರಿನ ಮಲರಾಯ ದೈವದ ಗಡಿ ಪ್ರಧಾನರಾದ ಸುಕುಮಾರ್ ಬಂಟ್ವಾಳ್, ಪಣೋಲಿಬೈಲ್ ಭಂಡಾರ ಮನೆಯ ರಮೇಶ್ ಪಣೋಲಿಬೈಲ್, ಜಿ. ಕನ್ನಡದ ಐಡಲ್ ರಾಜ್ಯ ಪ್ರಶಸ್ತಿ ಪಡೆದ ಸದಾನಂದ ಬಂಗೇರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿ ಕನ್ನಡ ಐಡಲ್ ಪ್ರಶಸ್ತಿ ಪಡೆದ ಸದಾನಂದ ಬಂಗೇರ, ಹೋಟೆಲ್ ಸಾಯಿ ಲೀಲಾ ಇವರನ್ನು ಸ್ವಾಮೀಜಿ ಯವರು ಕ್ಷೇತ್ರ ಪ್ರಸಾದ ನೀಡಿ ಅಭಿನಂದಿಸಿದರು.


