ವೇಣೂರು: ಸ್ಥಳೀಯ ಧನಲಕ್ಷ್ಮೀ ಟ್ರೇಡಿಂಗ್ ಕಂಪೆನಿಯಲ್ಲಿ ಇತ್ತೀಚೆಗೆ ‘ಎಂ-ಸೀಲ್ ಶೋಲ್ವೆಂಟ್ ಗಮ್’ (M-Seal Solvent Gum) ಕುರಿತಾದ ಪ್ಲಂಬರ್ಗಳ ವಿಶೇಷ ಸಭೆ (Plumber Meet) ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ವೇಣೂರು ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ಹೆಸರಾಂತ ಪ್ಲಂಬರ್ಗಳು ಭಾಗವಹಿಸಿ ಉತ್ಪನ್ನದ ತಾಂತ್ರಿಕ ಗುಣಮಟ್ಟ ಮತ್ತು ಬಳಕೆ ಕುರಿತು ಮಾಹಿತಿ ಪಡೆದುಕೊಂಡರು.


ಕಾರ್ಯಕ್ರಮದಲ್ಲಿ ವಿನಾಯಕ ಟ್ರೇಡರ್ಸ್ನ ಮಾಲಕರಾದ ಪ್ರಕಾಶ್ ಅವರು ಆಗಮಿಸಿ, ‘ಎಂ-ಸೀಲ್ ಶೋಲ್ವೆಂಟ್ ಗಮ್’ನ ವೈಶಿಷ್ಟ್ಯಗಳು, ಅದರ ಪರಿಣಾಮಕಾರಿ ಬಳಕೆ ಹಾಗೂ ಮಾರುಕಟ್ಟೆಯಲ್ಲಿನ ಪ್ರಾಮುಖ್ಯತೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಪ್ಲಂಬರ್ಗಳ ಪರವಾಗಿ ಮಾತನಾಡಿದ ಕಾಂಟ್ರಾಕ್ಟರ್ ಆಂಟನಿ ಅವರು ಉತ್ಪನ್ನದ ಗುಣಮಟ್ಟ ಮತ್ತು ಪ್ಲಂಬಿಂಗ್ ಕ್ಷೇತ್ರದಲ್ಲಿ ಎದುರಾಗುವ ದಿನನಿತ್ಯದ ಸವಾಲುಗಳಿಗೆ ಇದು ಹೇಗೆ ಸಹಕಾರಿಯಾಗಿದೆ ಎಂಬ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪ್ಲಂಬರ್ಗಳಿಗೆ ಕಂಪೆನಿಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವೇಣೂರಿನ ಪ್ರಮುಖ ಉದ್ಯಮಿಗಳಾದ ಬಿ. ಜಗದೀಶ ನಾಯಕ್, ಬಿ. ಮೋಹನದಾಸ ನಾಯಕ್, ಬಿ. ಮಂಜುನಾಥ ನಾಯಕ್ ಹಾಗೂ ಬಿ. ಆದಿತ್ಯ ನಾಯಕ್ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಎಂ-ಸೀಲ್ ಕಂಪೆನಿಯ ಪ್ರತಿನಿಧಿಗಳಾದ ಪುನೀತ್ ಮತ್ತು ಶಶಿರಾಜ್ ಅವರು ಸಂಪೂರ್ಣ ಕಾರ್ಯಕ್ರಮವನ್ನು ಸಮರ್ಥವಾಗಿ ನಿರ್ವಹಿಸಿ, ಕೊನೆಯಲ್ಲಿ ಆಗಮಿಸಿದ ಎಲ್ಲರಿಗೂ ವಂದನೆ ಸಲ್ಲಿಸಿದರು. ವೇಣೂರು ಹಾಗೂ ಸುತ್ತಮುತ್ತಲಿನ ಅನೇಕ ಪ್ರಸಿದ್ಧ ಪ್ಲಂಬರ್ಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.


