ದುಬೈ, ಅ.3: ದುಬೈನಿಂದ ಇಸ್ರೇಲ್ನ ತೆಲ್ ಅವೀವ್ಗೆ ತೆರಳುತ್ತಿದ್ದ ‘ಫ್ಲೈದುಬೈ’ (Flight FZ1073) ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವನ್ನು ಆಕಾಶದಲ್ಲೇ ಪತನಗೊಳಿಸಲು ಜಿಹಾದಿ ಕೋ-ಪೈಲಟ್ ಭೀಕರ ಸಂಚು ನಡೆಸಿದ್ದ ವೇಳೆ, 170ಕ್ಕೂ ಹೆಚ್ಚು ಅಮಾಯಕರ ಪ್ರಾಣ ಉಳಿದದ್ದು ಪ್ರಯಾಣಿಕರ ರೂಪದಲ್ಲಿದ್ದ ಇಬ್ಬರು ‘ಡೆಡ್ಹೆಡಿಂಗ್’ (Deadheading) ಆಫ್-ಡ್ಯೂಟಿ ಪೈಲಟ್ಗಳ ಹಠಾತ್ ಪ್ರವೇಶದಿಂದ! ಇದೀಗ ಈ ಡೆಡ್ಹೆಡಿಂಗ್ ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತದೆ. ವಿಮಾನಯಾನದ ವೇಳೆ ಈ ಡೆಡ್ಹೆಡಿಂಗ್ ಪೈಲಟ್ಗಳು ಯಾಕೆ? ಇವರ ಕೆಲಸ ಏನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.


ಇತ್ತೀಚೆಗೆ ಫ್ಲೈದುಬೈ (Flight FZ1073) ವಿಮಾನದಲ್ಲಿ ನಡೆದ ಭೀಕರ ದುರಂತವನ್ನು ತಡೆದು, 170ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿಸುವಲ್ಲಿ ಆಫ್-ಡ್ಯೂಟಿಯಲ್ಲಿದ್ದ ಇಬ್ಬರು ‘ಡೆಡ್ಹೆಡಿಂಗ್’ (Deadheading) ಪೈಲಟ್ಗಳು ಪ್ರಮುಖ ಪಾತ್ರ ವಹಿಸಿದ್ದರು. ಈ ಘಟನೆಯ ನಂತರ, ಸಾರ್ವಜನಿಕರಲ್ಲಿ ಮತ್ತು ವಿಮಾನಯಾನ ಕ್ಷೇತ್ರದಲ್ಲಿ ‘ಡೆಡ್ಹೆಡಿಂಗ್’ ಎಂದರೆ ಏನು? ಇವರು ವಿಮಾನದಲ್ಲಿ ಏತಕ್ಕಾಗಿ ಪ್ರಯಾಣಿಸುತ್ತಾರೆ? ಎಂಬ ಕುತೂಹಲ ಹಾಗೂ ಚರ್ಚೆಗಳು ಜೋರಾಗಿವೆ.
ವಿಮಾನಯಾನ ರಂಗದಲ್ಲಿ ‘ಡೆಡ್ಹೆಡಿಂಗ್’ ಎನ್ನುವುದು ಅತ್ಯಂತ ಮಹತ್ವದ ಹಾಗೂ ತಾಂತ್ರಿಕ ಕಾರ್ಯಾಚರಣೆಯಾಗಿದೆ. ಇದರ ವಿವರವಾದ ಮಾಹಿತಿ ಇಲ್ಲಿದೆ:
1. ಡೆಡ್ಹೆಡಿಂಗ್ ಅಂದರೆ ಏನು?
ವಿಮಾನಯಾನ ಸಂಸ್ಥೆಯೊಂದರ ಪೈಲಟ್ ಅಥವಾ ಕ್ಯಾಬಿನ್ ಕ್ರೂ ಸಿಬ್ಬಂದಿ, ತಾವು ಕೆಲಸ ಮಾಡುವ ಸಂಸ್ಥೆಯ ನಿಯೋಜಿತ ಕರ್ತವ್ಯಕ್ಕಾಗಿ (Duty) ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಾಮಾನ್ಯ ಪ್ರಯಾಣಿಕರಂತೆ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ‘ಡೆಡ್ಹೆಡಿಂಗ್’ ಎನ್ನಲಾಗುತ್ತದೆ. ಈ ಸಮಯದಲ್ಲಿ ಅವರು ವಿಮಾನವನ್ನು ಚಲಾಯಿಸುತ್ತಿರುವುದಿಲ್ಲ ಅಥವಾ ಪ್ರಯಾಣಿಕರ ಸೇವೆಗೆ ಲಭ್ಯವಿರುವುದಿಲ್ಲ, ಬದಲಿಗೆ ಕೇವಲ ಪ್ರಯಾಣಿಕರ ಸೀಟಿನಲ್ಲಿ ಕುಳಿತಿರುತ್ತಾರೆ.
2. ಡೆಡ್ಹೆಡಿಂಗ್ ಪೈಲಟ್ಗಳು ಯಾಕೆ ಪ್ರಯಾಣಿಸುತ್ತಾರೆ?
ವಿಮಾನ ಕಾರ್ಯಾಚರಣೆಗಳ ಸಮತೋಲನ (Repositioning): ಒಂದು ನಗರದಿಂದ ಮತ್ತೊಂದು ನಗರಕ್ಕೆ ತಲುಪಿದ ವಿಮಾನಕ್ಕೆ ಅಲ್ಲಿ ಹೊಸ ಪೈಲಟ್ ತಂಡದ ಅಗತ್ಯವಿರಬಹುದು. ಅಂತಹ ಸಂದರ್ಭಗಳಲ್ಲಿ ಪೈಲಟ್ಗಳನ್ನು ನಿರ್ದಿಷ್ಟ ವಿಮಾನ ನಿಲ್ದಾಣಕ್ಕೆ ತಲುಪಿಸಲು ಈ ವ್ಯವಸ್ಥೆ ಬಳಸಲಾಗುತ್ತದೆ.
ಫ್ಲೈಟ್ ರದ್ದತಿ ಅಥವಾ ಬದಲಾವಣೆ: ಹಠಾತ್ ಆಗಿ ಮೂಲ ಪೈಲಟ್ಗೆ ಅನಾರೋಗ್ಯ ಉಂಟಾದರೆ ಅಥವಾ ತಾಂತ್ರಿಕ ಕಾರಣಗಳಿಂದ ಬೇರೆಡೆ ಇರುವ ವಿಮಾನವನ್ನು ಮುನ್ನಡೆಸಲು ಬರ್ಯಾಯ ಪೈಲಟ್ ಬೇಕಾದಾಗ ಇವರನ್ನು ತಕ್ಷಣ ಕಳುಹಿಸಲಾಗುತ್ತದೆ.
ವಿಶ್ರಾಂತಿ ನಿಯಮಗಳು (Mandatory Rest Rules): ಪೈಲಟ್ಗಳು ನಿರಂತರವಾಗಿ ಇಷ್ಟೇ ಗಂಟೆಗಳು ಹಾರಾಟ ನಡೆಸಬೇಕು ಎಂಬ ಅಂತರರಾಷ್ಟ್ರೀಯ ನಿಯಮಗಳಿವೆ. ತಮ್ಮ ಕೆಲಸದ ಅವಧಿ ತೀರಿದ ನಂತರ, ಮುಂದಿನ ಕರ್ತವ್ಯದ ಸ್ಥಳಕ್ಕೆ ತಲುಪಲು ಅವರು ಡೆಡ್ಹೆಡ್ ಪ್ರಯಾಣಿಕರಾಗಿ ತೆರಳುತ್ತಾರೆ.
3. ಇವರ ಕೆಲಸ ಅಥವಾ ಕರ್ತವ್ಯವೇನು?
ಸಾಮಾನ್ಯವಾಗಿ: ಡೆಡ್ಹೆಡಿಂಗ್ ಪ್ರಯಾಣದ ವೇಳೆ ಇವರಿಗೆ ಯಾವುದೇ ಪ್ರತ್ಯಕ್ಷ ಕೆಲಸ ಇರುವುದಿಲ್ಲ. ಇವರ ಪ್ರಯಾಣದ ವೆಚ್ಚವನ್ನು ವಿಮಾನಯಾನ ಸಂಸ್ಥೆಯೇ ಭರಿಸುತ್ತದೆ ಮತ್ತು ಈ ಸಮಯವನ್ನು ಅವರ ಅಧಿಕೃತ ಕರ್ತವ್ಯದ ಅವಧಿ (Duty hours) ಎಂದೇ ಪರಿಗಣಿಸಲಾಗುತ್ತದೆ.
ತುರ್ತು ಸಂದರ್ಭಗಳಲ್ಲಿ: ಪ್ರಯಾಣಿಕರಂತೆ ಕುಳಿತಿದ್ದರೂ, ಇವರು ಪೂರ್ಣ ತರಬೇತಿ ಪಡೆದ ಪೈಲಟ್ಗಳಾಗಿರುತ್ತಾರೆ. ವಿಮಾನದಲ್ಲಿ ಹೈಜಾಕ್, ಪೈಲಟ್ಗಳ ಅಸ್ವಸ್ಥತೆ, ತಾಂತ್ರಿಕ ದೋಷ ಅಥವಾ ಭದ್ರತಾ ಬೆದರಿಕೆಯಂತಹ ಆಪತ್ಕಾಲ ಎದುರಾದಾಗ, ಇವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಕ್ಪಿಟ್ ನಿಯಂತ್ರಣಕ್ಕೆ ತೆಗೆದುಕೊಂಡು ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಸಾಮರ್ಥ್ಯ ಹೊಂದಿರುತ್ತಾರೆ.
ಸರಳವಾಗಿ ಹೇಳುವುದಾದರೆ, ಡೆಡ್ಹೆಡಿಂಗ್ ಪೈಲಟ್ಗಳು ವಿಮಾನಯಾನ ಸಂಸ್ಥೆಯ ಸುಗಮ ಕಾರ್ಯಾಚರಣೆಗೆ ಬೆನ್ನೆಲುಬಾಗಿದ್ದು, ಅಗತ್ಯ ಬಿದ್ದಾಗ ವಿಮಾನದೊಳಗಿನ ಅಪ್ರಕಟಿತ ‘ರಕ್ಷಕ’ರಾಗಿಯೂ ಕಾರ್ಯನಿರ್ವಹಿಸುತ್ತಾರೆ.
ವಿಮಾನದ ಕಾಕ್ಪಿಟ್ನಲ್ಲಿ ಕೇವಲ ಇಬ್ಬರು ಪೈಲಟ್ಗಳು ಇರಬೇಕಾದ ಜಾಗದಲ್ಲಿ ಒಟ್ಟು ನಾಲ್ವರು ‘ಫ್ಲೈದುಬೈ’ ಪೈಲಟ್ಗಳು ಆ ವಿಮಾನದಲ್ಲಿದ್ದರು. ಕಾಕ್ಪಿಟ್ನಲ್ಲಿ ಕೋ-ಪೈಲಟ್ ಹಮಾಮ್ ಅಲ್-ಹಮಾಮಿ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಇರಿದಿದ್ದ ಸಮಯದಲ್ಲಿ ಸಾಧಾರಣ ಪ್ರಯಾಣಿಕರಂತೆ ಕುಳಿತಿದ್ದ ಇಬ್ಬರು ಹೆಚ್ಚುವರಿ ಪೈಲಟ್ಗಳು ವಿಮಾನದ ನಿಯಂತ್ರಣ ತೆಗೆದುಕೊಂಡು ಸೌದಿ ಅರೇಬಿಯಾದ ‘ತಬುಕ್’ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.
ರಾಯಿಟರ್ಸ್ ವರದಿಯ ಪ್ರಕಾರ, ಕೋ-ಪೈಲಟ್ ಜಿಹಾದಿ ಅಲ್-ಹಮಾಮಿಯ ಧಾಂದಲೆಯಿಂದ ವಿಮಾನ ಅತ್ಯಂತ ವೇಗವಾಗಿ ಭೂಮಿಯತ್ತ ಹೋಗುತ್ತಿತ್ತು. ತೀವ್ರ ರಕ್ತಸ್ರಾವದಿಂದ ಕಾಕ್ಪಿಟ್ ಮೇಲೆ ಬಿದ್ದಿದ್ದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ವಿಮಾನ ಕೆಳಕ್ಕೆ ಹೋಗುತ್ತಿದ್ದ ಕ್ಷಣದಲ್ಲೇ ಹೆಣಗಾಡಿ ಕಾಕ್ಪಿಟ್ ಬಾಗಿಲನ್ನು ಒಳಗಿನಿಂದ ಅನ್ಲಾಕ್ ಮಾಡಿದರು. ಬಾಗಿಲು ತೆರೆಯುತ್ತಿದ್ದಂತೆ ಸೀಟಿನಿಂದ ಜಿಗಿದು ಬಂದ ಪ್ರಯಾಣಿಕರು ಒಳಗಡೆ ನುಗ್ಗಿ, ಕ್ಯಾಪ್ಟನ್ ಸ್ಮಿತ್ ಅವರಿಗೆ ಚಾಕು ಇರಿದಿದ್ದ ಕೋ-ಪೈಲಟ್ನನ್ನು ಹಿಡಿದು ಉಸಿರುಗಟ್ಟಿಸಿ ಮೆಟ್ಟಿಹಾಕಿದರು.
ಈ ಹಂತದಲ್ಲಿ, ವಿಮಾನದಲ್ಲಿದ್ದ ಇಬ್ಬರು ಹೆಚ್ಚುವರಿ ‘ಫ್ಲೈದುಬೈ’ ಪೈಲಟ್ಗಳು ಕಾಕ್ಪಿಟ್ ಪ್ರವೇಶಿಸಿ ತಕ್ಷಣವೇ ವಿಮಾನದ ಕಂಟ್ರೋಲ್ ತೆಗೆದುಕೊಂಡರು. ಅಪಾರ ಅನುಭವವಿದ್ದ ಇಬ್ಬರೂ ಪೈಲಟ್ಗಳು ವಿಮಾನವನ್ನು ಸೌದಿಯ ತಬುಕ್ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ಡೈವರ್ಟ್ ಮಾಡಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.
ವಿಮಾನದಲ್ಲೇಕೆ ನಾಲ್ವರು ಪೈಲಟ್ಗಳು ಇದ್ದರು?:
ಸಾಮಾನ್ಯವಾಗಿ ಒಂದು ವಿಮಾನದಲ್ಲಿ ನಾಲ್ವರು ಪೈಲಟ್ಗಳನ್ನು ಕಳುಹಿಸುವುದು ಅತ್ಯಂತ ಅಪರೂಪ. ಮುನ್ನೆಚ್ಚರಿಕೆಯಾಗಿ ಯಾರೂ ಹೆಚ್ಚುವರಿ ಪೈಲಟ್ಗಳನ್ನು ನಿಯೋಜಿಸುವುದಿಲ್ಲ. ಹಾಗಿದ್ದರೂ ಈ ವಿಮಾನದಲ್ಲಿ ಇಬ್ಬರು ಹೆಚ್ಚುವರಿ ಪೈಲಟ್ಗಳು ಸಾಧಾರಣ ಸೀಟಿನಲ್ಲಿ ಪ್ರಯಾಣಿಕರಂತೆ ಕುಳಿತಿದ್ದರು. ವಿಮಾನಯಾನ ಕ್ಷೇತ್ರದಲ್ಲಿ ಇದನ್ನು ‘ಡೆಡ್ಹೆಡಿಂಗ್’ ಎನ್ನಲಾಗುತ್ತದೆ.
ಏನಿದು ‘ಡೆಡ್ಹೆಡಿಂಗ್’ ಪದ್ಧತಿ?:
ವಿಮಾನಯಾನ ಸಂಸ್ಥೆಯೊಂದು ತನ್ನ ಮುಂದಿನ ಬೇರೊಂದು ವಿಮಾನ ಹಾರಾಟಕ್ಕಾಗಿ ಪೈಲಟ್ಗಳನ್ನು ಅಥವಾ ವಿಮಾನ ಸಿಬ್ಬಂದಿಯನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ತಲುಪಿಸಬೇಕಿದ್ದಾಗ, ಅವರನ್ನು ಬೇರೊಂದು ನಿಗದಿತ ವಿಮಾನದಲ್ಲಿ ಪ್ರಯಾಣಿಕರಂತೆ ಕಳುಹಿಸುತ್ತದೆ. ‘ಡೆಡ್ಹೆಡಿಂಗ್’ ಮಾಡುವ ಪೈಲಟ್ಗಳು ಡ್ಯೂಟಿಯಲ್ಲೇ ಇದ್ದಾರೆ ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಪೂರ್ಣ ಪ್ರಮಾಣದ ವೇತನ ದೊರೆಯುತ್ತದೆ ಮತ್ತು ಅವರ ಕೆಲಸದ ಸಮಯ ಗಣನೆಗೆ ಬರುತ್ತದೆ.
ಅವರು ಯಾವುದೇ ಕಾಕ್ಪಿಟ್ ಕೆಲಸ ಅಥವಾ ವಿಮಾನ ತಪಾಸಣೆ ಮಾಡುವುದಿಲ್ಲ. ಅವರು ಕನ್ಫರ್ಮ್ ಟಿಕೆಟ್ನೊಂದಿಗೆ ಪೂರ್ಣ ಯುನಿಫಾರ್ಮ್ನಲ್ಲಿ ಸಾಮಾನ್ಯ ಪ್ರಯಾಣಿಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಫ್ಲೈದುಬೈ ಸಂಸ್ಥೆಯು ಇದನ್ನು ದೃಢಪಡಿಸಿದ್ದು, ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ನೆರವಾದ ಸಿಬ್ಬಂದಿ “ಮತ್ತೊಂದು ಕಾರ್ಯಕ್ಕಾಗಿ ಪ್ರಯಾಣಿಸುತ್ತಿದ್ದ ಡ್ಯೂಟಿಯಲ್ಲಿದ್ದ ಫ್ಲೈದುಬೈ ಪೈಲಟ್ಗಳು” ಎಂದು ಸ್ಪಷ್ಟಪಡಿಸಿದೆ. ಆ ದಿನ ಅವರಿದ್ದದ್ದು ವಿಮಾನದ 170ಕ್ಕೂ ಹೆಚ್ಚು ಜನರ ಪಾಲಿಗೆ ವರಪ್ರದವಾಯಿತು.



