ವೇಣೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಹಾಗೂ ಪಿಎಂ ಶ್ರೀ ಕೆಪಿಶಾಲೆ ಬಜಿರೆ ಇದರ ಸಹಯೋಗದಲ್ಲಿ ನಡೆದ ನಾರಾವಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ಶಾಲೆಗೆ ಕೀರ್ತಿ ತಂದಿರುತ್ತಾರೆ.


ಬಹುಮಾನ ಪಡೆದ ವಿದ್ಯಾರ್ಥಿಗಳು:
ಹೇಮಂತ್ ಕುಮಾರ್-9ನೇ ತರಗತಿ -1500 ಮೀ ಓಟ- ದ್ವಿತೀಯ, 700 ಮೀ ಓಟ – ದ್ವಿತೀಯ
ಅನ್ವೇಶ್ -9ನೇ ತರಗತಿ -400 ಮೀ ಓಟ- ತೃತೀಯ
ಹರ್ಷಿಕ- 9 ನೇ ತರಗತಿ 400 ಮೀ ಓಟ -ತೃತೀಯ
ಆಕಾಶ್-9ನೇ ತರಗತಿ -ಗುಂಡೆಸೆತ – ತೃತೀಯ
ಬಾಲಕರ 4400 ಮೀ ರಿಲೇ ಹೇಮಂತ್, ಅನ್ವೇಶ್, ದೀಕ್ಷಿತ್, ವೀಕ್ಷಿತ್ – ಪ್ರಥಮ
ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ತುಂಬು ಹೃದಯದ ಅಭಿನಂದನೆ ಸಲ್ಲಿಸಿದೆ.



