ಗುಂಡೂರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಂಡೂರಿ ಕಾರ್ಯಕ್ಷೇತ್ರದ ಶೃದ್ಧಾ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರಿಗೆ ಅರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.
ಗುರುವಾಯನಕೆರೆ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ರವಿಕಲ ಅವರು, ಮಹಿಳೆಯರ ಆರೋಗ್ಯ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಗುಂಡೂರಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಹರೀಶ್ ಪೂಜಾರಿ, ಶ್ರದ್ಧಾ ವಿಕಾಸದ ಸಂಯೋಜಕಿ ಶ್ರೀಮತಿ ಕುಶಲಾಕ್ಷಿ ಮತ್ತು ಜ್ಞಾನವಿಕಾಸದ ಸರ್ವ ಸದಸ್ಯರು ಉಪಸ್ಥಿತರಿದ್ದರು.



