ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ, ನಟ ವಿಜಯ್ ಥಳಪತಿ ಮತ್ತು ಪತ್ನಿ ಸಂಗೀತಾರ ವಿಚ್ಛೇದನ ಅರ್ಜಿಯ ವಿಚಾರಣೆಯು ಇಂದು ಸೋಮವಾರ (ಜೂನ್ 15) ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಿತು. ನ್ಯಾಯಪೀಠ ವಕೀಲರ ಮನವಿ ತಿರಸ್ಕರಿಸಿ ಅರ್ಜಿ ವಿಚಾರಣೆಯನ್ನು ಮುಂದಿನ ಆಗಸ್ಟ್ ಮೊದಲ ವಾರಕ್ಕೆ ಮುಂದೂಡಿ ಆದೇಶಿಸಿತು.
ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಅವರ ನಡುವಿನ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ಸೋಮವಾರ ಮಹತ್ವದ ಆದೇಶ ನೀಡಿದೆ. ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ದಂಪತಿ ಸಲ್ಲಿಸಿದ್ದ ಮನವಿಯನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಅದರೆ ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.
ವಿಚ್ಛೇದನ ಅರ್ಜಿ ಸಂಬಂಧ ದಂಪತಿಗಳಿಬ್ಬರೂ ಮುಂದಿನ ವಿಚಾರಣೆಗೆ ಖುದ್ದಾಗಿ ಕೋರ್ಟ್ಗೆ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿ ಕೋರ್ಟ್ ಆದೇಶಿತು. ನ್ಯಾಯಾಲಯವು, ಈ ಹಂತದಲ್ಲಿ ಇಡೀ ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಆಗಸ್ಟ್ 7ಕ್ಕೆ ಮುಂದೂಡಿ ಆದೇಶ ಹೊರಡಿಸಿತು.
ಈ ಹಿಂದೆಯೂ ಆನ್ಲೈನ್ನಲ್ಲೇ ದಂಪತಿ ಹಾಜರು ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗ ಪಕ್ಷದ ಮುಖ್ಯಸ್ಥ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರಿಂದ ವಿಚ್ಛೇದನ ಕೋರಿ ಪತ್ನಿ ಸಂಗೀತಾ 2025ರ ಡಿಸೆಂಬರ್ನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಜಯ್ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿರುವ ಬಗ್ಗೆ ಅವರು ಆರೋಪಿಸಿ ವಿಚ್ಛೇದನೆ ನೀಡುವಂತೆ ಕೋರಿದ್ದರು. ಒಟ್ಟು 12 ಪುಟಗಳ ಸುದೀರ್ಘ ಅರ್ಜಿಯಲ್ಲಿ ಕೌಟುಂಬಿಕ ಕಲಹ ಕುರಿತು ಸಂಗೀತಾ ವಿರಿಸಿದ್ದರು ಎನ್ನಲಾಗಿದೆ.
ಆಗಸ್ಟ್ 7ಕ್ಕೆ ದಂಪತಿ ಖುದ್ದು ಹಾಜರಿಗೆ ಸೂಚನೆ
ಅಂದು ಕೋರ್ಟ್ ಎರಡು ಕಡೆಗಿನ ವಾದವನ್ನು ಆಲಿಸಿತ್ತು, ಮುಂದಿನ ಕೋರ್ಟ್ ಪ್ರಕ್ರಿಯೆಯನ್ನು ಜೂನ್ 15ಕ್ಕೆ ನಿಗದಿಪಡಿಸಿತು. ಇಂದು ಖುದ್ದು ಇಬ್ಬರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ವಿಡಿಯೋ ಕಾನ್ಫ್ರೆನ್ಸ್ ಮೂಲಕ (ಆನ್ಲೈನ್) ಹಾಜರಾಗಲು ಮನವಿ ಮಾಡಿದ್ದರಿಂದ ಕೋಪಗೊಂಡ ನ್ಯಾಯಲಯ ದಂಪತಿ ಮನವಿಯನ್ನು ತಿರಸ್ಕರಿಸಿ, ಅರ್ಜಿ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು. ಮುಂದಿನ ವಿಚಾರಣೆಯಲ್ಲಿ ದಂಪತಿ ಇಬ್ಬರು ಖಡ್ಡಾಯವಾಗಿ ಖುದ್ದು ಹಾಜರಾಗುವಂತೆ ಆದೇಶಿಸಿದೆ. ವಿಜಯ್ ಸಿನಿಮಾ ನಟ, ತಮಿಳುನಾಡಿನ ಸಿಎಂ ಆಗಿದ್ದರಿಂದ ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಹೆಚ್ಚು ಕುತೂಹಲ ಸೃಷ್ಟಿಸಿದೆ.



