ಪಡ್ಡಂದಡ್ಕ: ಶ್ರೀ ಮಂಜುನಾಥೇಶ್ವರ ಭಜನ ಮಂಡಳಿ ಪಡ್ಡಂದಡ್ಕ, ಜನಸೇವಾ ಟ್ರಸ್ಟ್ (ರಿ.) ಪಡ್ಡಂದಡ್ಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಹೊಸಂಗಡಿ, ಬಡಕೋಡಿ, ಕರಿಮಣೇಲು ಸಾಧನಾ ಶ್ರೀ ಮಹಿಳಾ ಮಂಡಲ ಪಡ್ಡಂದಡ್ಕ ಇವರ ಸಹಯೋಗದಲ್ಲಿ 38ನೇ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ಅಶ್ವಥ ವೃಕ್ಷದ ಉಪನಯನ ಮತ್ತು ವಿವಾಹ ಸಂಸ್ಕಾರ ಪೂಜೆ ಹಾಗೂ ಯಕ್ಷಗಾನ ಬಯಲಾಟವು ಫೆ. 7ರಂದು ಪಡ್ಡಂದಡ್ಕ ಶ್ರೀ ಮಂಜುನಾಥೇಶ್ವರ ಭಜನ ಮಂದಿರದ ವಠಾರದಲ್ಲಿ ನಡೆಯಲಿದೆ.
ಫೆ. 6ರಂದು ಸಂಜೆ ದೇವತಾ ಪ್ರಾರ್ಥನೆ, ವಾಸ್ತುಪೂಜೆ, ವಾಸ್ತುಹೋಮ ಮುಂತಾದ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ. 7ರಂದು ಬೆಳಿಗ್ಗೆ 8-00ರಿಂದ ಗಣಹೋಮ, ಬೆಳಿಗ್ಗೆ 10-45ರಿಂದ ಅಶ್ವಥ ವೃಕ್ಷಕ್ಕೆ ಉಪನಯನ ಸಂಸ್ಕಾರ, ವಿವಾಹ ಸಂಸ್ಕಾರ ನಡೆಯಲಿದೆ. ಮಧ್ಯಾಹ್ನ 12-00 ರಿಂದ ಕಲ್ಪೋಕ್ಷ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5-00ರಿಂದ ಸಾರ್ವಜನಿಕ ಶ್ರೀ ಶನೀಶ್ಚರ ಪೂಜೆ ಆರಂಭವಾಗಲಿದ್ದು, 7-00 ಗಂಟೆಗೆ ಮಹಾಪೂಜೆ ನಡೆಯಲಿದೆ. ರಾತ್ರಿ 7-30ರಿಂದ ಭಜನೆ, ರಾತ್ರಿ 8-30ರಿಂದ ಶ್ರೀ ಮಂಜುನಾಥ ಸ್ವಾಮಿಯ ಮಹಾಪೂಜೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 9-30ರಿಂದ ಶ್ರೀ ವೀರಭದ್ರಸ್ವಾಮಿ ದಶವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡಕ ಅವರಿಂದ ಶ್ರೀ ಹಿರಿಯಡಕ ಕ್ಷೇತ್ರ ಮಹಾತ್ಮೆ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರಾದ ದಿನೇಶ್ ಶೆಟ್ಟಿ 9833000706 ಹಾಗೂ ಕಾರ್ಯದರ್ಶಿ ರಮೇಶ್ ಮೂಲ್ಯ 9740323652 ಅವರನ್ನು ಸಂಪರ್ಕಿಸಬಹುದಾಗಿದೆ.
ಏನಿದು ಅಶ್ವಥ ಮರದ ಉಪನಯನ?
ಅಶ್ವತ್ಥ ವೃಕ್ಷಕ್ಕೆ (ಅರಳಿ ಮರ) ಉಪನಯನ ಮಾಡುವುದು ಭಾರತದ, ವಿಶೇಷವಾಗಿ ತುಳುನಾಡು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಕಂಡುಬರುವ ವಿಶಿಷ್ಟ ಸಾಂಪ್ರದಾಯಿಕ ಆಚರಣೆ.
ಅಶ್ವತ್ಥ ವೃಕ್ಷದಲ್ಲಿ ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು, ಮಹೇಶ್ವರ) ವಾಸವಿದೆ ಎಂಬ ನಂಬಿಕೆ ಇದ್ದು, ಈ ಗಿಡಗಳನ್ನು ಪವಿತ್ರವೆಂದು ಭಾವಿಸಿ ಉಪನಯನ (ಜನಿವಾರ ಧರಿಸುವುದು) ಮತ್ತು ನಂತರ ವಿವಾಹವನ್ನು (ಸಾಮಾನ್ಯವಾಗಿ ನೆಲ್ಲಿ ಗಿಡದೊಂದಿಗೆ) ಶಾಸ್ತ್ರೋಕ್ತವಾಗಿ ನಡೆಸಲಾಗುತ್ತದೆ.
ಸಾಮಾನ್ಯವಾಗಿ ಗಿಡ ನೆಟ್ಟು 10 ವರ್ಷಗಳಾದ ನಂತರ, ಜನಿವಾರವನ್ನು (ಉಪನಯನ) ಧರಿಸಿ, ತದನಂತರ ನೆಲ್ಲಿ ಗಿಡದೊಂದಿಗೆ ವಿವಾಹವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ. ಈ ಸಂಪ್ರದಾಯವು ಪರಿಸರ ಸಂರಕ್ಷಣೆ ಮತ್ತು ಗಿಡಮೂಲಿಕೆಗಳ ಮಹತ್ವವನ್ನು ಎತ್ತಿಹಿಡಿಯುತ್ತದೆ. ತುಳುನಾಡಿನಲ್ಲಿ ಇದು ಬಲು ಅಪರೂಪದ ಮತ್ತು ಪವಿತ್ರವಾದ ಶಾಸ್ತ್ರವೆಂದು ಪರಿಗಣಿಸಲ್ಪಟ್ಟಿದೆ. ಈ ಆಚರಣೆಗಳು ಹಿಂದೂ ಸಂಪ್ರದಾಯದಲ್ಲಿ ಮರಗಳನ್ನು ದೈವಿಕವಾಗಿ ಆರಾಧಿಸುವ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತವೆ.






