ಬೆಳ್ತಂಗಡಿ: ಶಾಸಕ ಶ್ರೀ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ “ಜನರ ಬಳಿಗೆ ತಾಲೂಕು ಆಡಳಿತ” ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮವು ಡಿ . 24 ರಂದು ವೇಣೂರು ಹೋಬಳಿಯ ಅಲ್ಲಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಲಿದ್ದು ಬೆಳಿಗ್ಗೆ 9.30 ಗಂಟೆಗೆ ಗ್ರಾಮ ಪಂಚಾಯತ್ ಕುಕ್ಕೇಡಿ, 11.00 ಗಂಟೆಗೆ ಆರಂಬೋಡಿ , ಮಧ್ಯಾಹ್ನ 2.00 ಗಂಟೆಗೆ ಹೊಸಂಗಡಿ, ಸಂಜೆ 4.00 ಗಂಟೆಗೆ ಮರೋಡಿ ಜನಸ್ಪಂದನಾ ಕಾರ್ಯಕ್ರಮವು ನಡೆಯಲಿದೆ.ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಲಾಖಾ ಸೇವಾ ಸಲಹೆ ಹಾಗೂ ಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .






