ವೇಣೂರು: ಇತಿಹಾಸ ಪ್ರಸಿದ್ಧ ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪೂರ್ವತಯಾರಿ ಬಗ್ಗೆ ಭಕ್ತಾಧಿಗಳ ಸಮಾಲೋಚನ ಸಭೆಯು ದೇವಸ್ಥಾನದಲ್ಲಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎ. ಜಯರಾಮ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ, ತಮ್ಮೆಲ್ಲರ ಸಹಕಾರದಿಂದ ಕಳೆದ ವರ್ಷದ ಜಾತ್ರೋತ್ಸವವು ಯಶಸ್ವಿಯಾಗಿ ಜರಗಿರುವುದನ್ನು ಸ್ಮರಿಸುತ್ತೇವೆ. ಈ ವರ್ಷವೂ ತಮ್ಮ ಸಂಪೂರ್ಣ ಸಹಕಾರವನ್ನು ಬಯಸುವುದಾಗಿ ತಿಳಿಸಿದರು.
ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.





