ವೇಣೂರು: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ 2026ರಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗಾಗಿ ಪ್ರಖ್ಯಾತ ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯಿಂದ ಅಪ್ರೆಂಟಿಸ್ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಯಿತು.
ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ರವಿ, ಕು. ಪ್ರಿಯಾಂಕ ಹಾಗೂ ಕು. ಕಾವ್ಯ ಅವರು ಸಂದರ್ಶನ ನಡೆಸಿದರು. ವಿವಿಧ ವೃತ್ತಿಗಳಿಂದ ಸುಮಾರು ೨೨೮ ವಿದ್ಯಾರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಡಿಎಂ ಸಂಸ್ಥೆಯ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಅವರು, ವೇಣೂರು ಐಟಿಐಯಲ್ಲಿ ಈ ವರ್ಷ ಈಗಾಗಲೇ ೭ ವಿವಿಧ ಕಂಪೆನಿಗಳಿಂದ ಕ್ಯಾಂಪಸ್ ಸಂದರ್ಶನಗಳು ನಡೆದಿದ್ದು, ಇನ್ನೂ 8 ರಿಂದ 10 ಕಂಪೆನಿಗಳಿಂದ ಸಂದರ್ಶನಗಳು ನಡೆಯಲಿವೆ ಎಂದು ತಿಳಿಸಿದರು.
ನೇಮಕಾತಿ ಅಧಿಕಾರಿ ಶ್ರೇಯಸ್ ಸಂಘಟಿಸಿ, ಕಿರಿಯ ತರಬೇತಿ ಅಧಿಕಾರಿಗಳಾದ ದಯಾನಂದ ಭಂಡಾರಿ, ನಾಗೇಶ್ ಶೇಟ್, ಜ್ಯೋತ್ಸ್ನಾ, ಕುಶ ಮತ್ತು ಶ್ರವಣ್ ಅವರು ಸಂದರ್ಶನ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ಣೂರು ಎಸ್ಡಿಎಂ ಐಟಿಐ: ಕ್ಯಾಂಪಸ್ ಸಂದರ್ಶನ





