ವೇಣೂರು: ಪಡ್ಡಂದಡ್ಕ ಸಾಧನಾಶ್ರೀ ಮಹಿಳಾ ಮಂಡಲದ ವತಿಯಿಂದ ಪ್ರಥಮ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ ಕಾರ್ಯಕ್ರಮವು ಶ್ರೀಪತಿ ಭಟ್ ಅವರ ಪೌರೋಹಿತ್ಯದಲ್ಲಿ ಆ. 21ರಂದು ಪಡ್ಡಂದಡ್ಕದ ಸಮುದಾಯ ಭವನದಲ್ಲಿ ಜರಗಿತು.
ಬಳಿಕ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಾಧನಾಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪ್ರತಿಭಾ ಸುಧೀರ್ ವಹಿಸಿದ್ದರು. ಶಾಸಕ ಹರೀಶ್ ಪೂಂಜ ಅವರು ಆಗಮಿಸಿ ಶುಭ ಹಾರೈಸಿದರು. ಮೂಡಬಿದಿರೆ ಮಹಾವೀರ ಕಾಲೇಜಿನ ಉಪನ್ಯಾಸಕಿ ಸುಜಾತ ಶೆಟ್ಟಿ ಅವರು ವರಮಹಾಲಕ್ಷ್ಮೀ ಪೂಜಾ ಆಚರಣೆ ಮತ್ತು ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು. ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್, ಸಾಧನಾಶ್ರೀ ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಳಿನಾಕ್ಷಿ ಸುಧಾಕರ್ ಕಾರ್ಯಕ್ರಮ ನಿರೂಪಿಸಿ, ಅಕ್ಷತಾ ಗೌತಮ್ ಸ್ವಾಗತಿಸಿ, ರಕ್ಷಿತಾ ಆರ್. ವಂದಿಸಿದರು.





