ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ, ಮಾಜಿ ಗೃಹಸಚಿವ ಬಿ. ರಮಾನಾಥ ರೈ ಸೇರಿದಂತೆ ಹಲವು ಗಣ್ಯರಿಂದ ಪುಷ್ಪಾರ್ಚನೆ
ವೇಣೂರು: ಪ್ರಗತಿಪರ ಕೃಷಿಕರಾಗಿ, ಕೊಡುಗೈದಾನಿಯಾಗಿ ಸ್ಥಳೀಯ ಧಾರ್ಮಿಕ ಹಾಗೂ ಸಮಾಜಮುಖಿ ವ್ಯಕ್ತಿಯಾಗಿ ಗುರುತಿಸಲ್ಪಟ್ಟು ಇತ್ತೀಚೆಗೆ (ಡಿ.೧೨) ವಿಧಿವಶರಾದ ಕಾರಂದೂರು ಲಕ್ಷ್ಮಿ ಪದ್ಮ ಪೂಜಾರಿಯವರ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮವು ಗುಂಡೂರಿ ಗ್ರಾಮದ ಅವರ ಸ್ವಗೃಹ ಪದ್ಮಲಕ್ಷ್ಮಿಯಲ್ಲಿ ಡಿ. 26ರಂದು ನೆರವೇರಿತು.
ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಅವರು ಅವರ ಜೀವನದ ಆದರ್ಶಗಳನ್ನು ಪ್ರಸ್ತಾವಿಸಿ ನುಡಿ ನಮನ ಸಲ್ಲಿಸಿದರು.


ಭಾರತ ಸರ್ಕಾರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ, ಕರ್ನಾಟಕ ಸರ್ಕಾರದ ಮಾಜಿ ಗೃಹ ಸಚಿವ ಬೆಳ್ಳಿಬೆಟ್ಟುಗುತ್ತು ಬಿ. ರಮಾನಾಥ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ ಆರ್. ಪೂಜಾರಿ, ಸಹಕಾರಿ ರತ್ನ ಸತೀಶ್ ಕೆ. ಕಾಶಿಪಟ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ತಾಪನಾ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಮಾಲತಿ ಜನಾರ್ಧನ ಪೂಜಾರಿ, ದೀಪಕ್ ಜೆ. ಪೂಜಾರಿ, ಸ್ಥಳೀಯ ಜನಪ್ರತಿನಿಧಿಗಳು, ವೇಣೂರು ಸಹಕಾರಿ ಸಂಘ, ಗುರುದೇವ ವಿವಿದೋದ್ದೇಶ ಸಹಕಾರಿ ಸಂಘ, ಬಿಲ್ಲವ ಸಂಘ, ಲಯನ್ಸ್ ಕ್ಲಬ್, ಸಿದ್ದಕಟ್ಟೆ ರೋಟರಿ ಕಬ್ಬಿನ ಪ್ರತಿನಿಧಿಗಳು, ವಿವಿಧ ಕ್ಷೇತ್ರದ ಗಣ್ಯರು, ಕುಟುಂಬಸ್ಥರು, ಹಾಗೂ ಬಂಧು ಮಿತ್ರರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.






