ಬೆಂಗಳೂರು, ಮೇ 20: ಭಾರೀ ಕುತೂಹಲ ಮೂಡಿಸಿರುವ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿಚಾರ ಸಂಬಂಧ ಇಂದು ( ಮೇ 21) ಸುಪ್ರೀಂಕೋರ್ಟ್ನ ಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶ ರದ್ದು ಮಾಡಿ ತಡೆ ನೀಡಿದ್ದ ಸುಪ್ರೀಂಕೋರ್ಟ್, ಶಾಸರಾಗಿ ಟಿ.ಡಿ. ರಾಜೇಗೌಡ ಅವರನ್ನೇ ಮುಂದುವರಿಸಿತ್ತು. ಹೀಗಾಗಿ ಮತ ಮರು ಎಣಿಕೆ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿಯ ಜೀವರಾಜ್ಗೆ ಹಿನ್ನಡೆ ಆಗಿತ್ತು.





