ಆರಂಬೋಡಿ: ಶ್ರೀ ಕ್ಷೇತ್ರ ಪೂಂಜದ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ. 13 ರಂದು ಉಡುಪಿ ಚಿಟ್ಪಾಡಿ ಶ್ರೀ ಶ್ರೀನಿವಾಸ ದೇವಸ್ಥಾನದ ಕಲ್ಯಾಣಮೂರ್ತಿಗೆ ಶ್ರೀನಿವಾಸ ಕಲ್ಯಾಣೋತ್ಸವವು ನಡೆಯಿತು.
ಪೂಂಜ ದೇವಸ್ಥಾನದ ಪಕ್ಕದ ಗದ್ದೆಯಲ್ಲಿ ಹಾಕಲಾದ, ವಿದ್ಯುತ್ ದೀಪ ಹಾಗೂ ಪುಷ್ಪಗಳಿಂದ ಅಲಂಕೃತವಾದ ಭವ್ಯ ಮಂಟಪದಲ್ಲಿ, ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದ್ದು ವೇದಮೂರ್ತಿ ಕುಕ್ಕಿಕಟ್ಟೆ ಶ್ರೀ ರಾಘವೇಂದ್ರ ತಂತ್ರಿಯವರ ನೇತೃತ್ವದಲ್ಲಿ ವಿಧಿ ವಿಧಾನಗಳು ನೆರವೇರಿತು. ಬಳಿಕ ರಾತ್ರಿ 8:00 ಗಂಟೆಗೆ ಮಹಾಪೂಜೆ ನಡೆದು ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.





