ಸುಬ್ರಹ್ಮಣ್ಯ: ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಮಂಡಳಿಯು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಇನ್ಮುಂದೆ ದೇವಾಲಯದಲ್ಲಿ ಮಧ್ಯವರ್ತಿಗಳ ಮೂಲಕ ತೆಗೆದುಕೊಳ್ಳುವ ಸೇವೆ ಮಾನ್ಯ ಮಾಡುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಕುಕ್ಕೆ ದೇವಾಲಯದಲ್ಲಿ ಸೇವೆ ನೆರವೇರಿಸಿದರೆ ಮಾತ್ರ ಪೂರ್ಣಫಲ ಸಿಗಲಿದೆ. ಮಧ್ಯವರ್ತಿಗಳ ಮೂಲಕ ಖಾಸಗಿ ಸ್ಥಳಗಳಲ್ಲಿ ಪೂಜೆ ಮಾಡಿದರೆ ಪೂರ್ಣ ಫಲ ಸಿಗುವುದಿಲ್ಲ; ಅಲ್ಲದೆ ದೋಷವೂ ಸಹ ಪರಿಹಾರವಾಗುವುದಿಲ್ಲ ಎಂದು ಹೇಳಲಾಗಿದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಪೂಜೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ ಹಾಗೂ ಆಶ್ಲೇಷ ಬಲಿ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳು ನಡೆಯುತ್ತವೆ. ಆದರೆ, ಈ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಶೇಷ ಹಾಗೂ ಪ್ರಮುಖ ಪೂಜಾ ಸಮಾರಂಭಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇದೀಗ ಈ ದೇವಸ್ಥಾನದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ದೇವಾಲಯದ ಆಡಳಿತ ಮಂಡಳಿಯು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ದೇವಾಲಯದಲ್ಲಿ ಮಧ್ಯವರ್ತಿಗಳಿಂದ ಪೂಜೆ ನೆರವೇರಿಸಿದರೆ ನಿಮಗೆ ಪೂರ್ಣಫಲ ಸಿಗುವುದಿಲ್ಲ ಅಂತ ದೇವಾಳದ ಆಡಳಿತ ಮಂಡಳಿಯು ತಿಳಿಸಿದೆ. ಪ್ರಮುಖ ಪೂಜೆಗಳನ್ನು ದೇವಾಲಯದ ದೇವಳದಲ್ಲಿ ಮಾಡಿದರೆ ಮಾತ್ರ ಭಕ್ತಾದಿಗಳಿಗೆ ಪೂರ್ಣಫಲ ಸಿಗಲಿದೆ ದೇವಾಲಯದ ಆಡಳಿತ ಮಂಡಳಿಯು ಹೇಳಿದೆ.
ದೇವಾಲಯದಲ್ಲಿ ನಡೆಯುವ ಪೂಜೆಗಳನ್ನು ಇಲ್ಲಿನ ಖಾಸಗಿ ವಸತಿ ಗೃಹಗಳಲ್ಲಿ, ಮಠ, ಮಂದಿರ ಅಥವಾ ಪುರೋಹಿತರ ಮನೆಗಳಲ್ಲಿ ನೆರವೇರಿಸುವುದರಿಂದ ದೋಷವು ಪರಿಹಾರವಾಗುವುದಿಲ್ಲ. ಅಲ್ಲದೆ ಈ ರೀತಿ ಪೂಜೆಗಳನ್ನು ಮಾಡುವುದರಿಂದ ಭಕ್ತರಿಗೆ ಯಾವುದೇ ಫಲವೂ ಸಹ ಸಿಗಲ್ಲ. ಭಕ್ತಾದಿಗಳು ಈ ದೇವಾಲಯದಲ್ಲಿ ಮಾಡುವ ಸರ್ಪದೋಷ ಅಥವಾ ಸರ್ಪ ಸಂಸ್ಕಾರದ ಪೂಜೆಗಳಿಗೆ ಸಂಬಂಧಿಸಿದಂತೆ ಭಕ್ತರಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸುವ ಉದ್ದೇಶದಿಂದ ಈ ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಧ್ಯವರ್ತಿಗಳಿಗೆ ಕಡಿವಾಣ
ಕರ್ನಾಟಕದ ಸುಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಮಂಡಳಿಯು ದೇವಾಲಯದ ಆವರಣದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕುವುದಕ್ಕೆ ಮುಂದಾಗಿದೆ. ಈ ದೇವಸ್ಥಾನಕ್ಕೆ ಬರುವ ಭಕ್ತರು ದೇವಾಲಯದ ಶ್ರೀ ದೇವಳದಲ್ಲಿ ಪೂಜೆಯನ್ನು ನೆರವೇರಿಸಿದರೆ ಮಾತ್ರವೇ ಪೂರ್ಣ ಫಲ ಸಿಗಲಿದೆ. ಆದರೆ ಮಧ್ಯವರ್ತಿಗಳ ಮೂಲಕ ಖಾಸಗಿ ಸ್ಥಳಗಳಲ್ಲಿ ಪೂಜೆ ನೆರವೇರಿಸಬಾರದು ಎಂದು ಹೇಳಿದೆ. ಅಲ್ಲದೆ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಇತರ ಹೋಮಗಳು, ಆಶ್ಲೇಷ ಬಲಿ ಸೇವೆಗಳನ್ನು ಮಧ್ಯವತಿಗಳ ಮೂಲಕ ಮಾಡಿಸಿ ಮೋಸ ಹೋಗಬಾರದು. ದುಪ್ಪಟ್ಟು ಹಣ ಪಾವತಿ ಮಾಡಬಾರದು ಎಂದು ದೇವಳದ ಆಡಳಿತ ಮಂಡಳಿ ಮನವಿ ಮಾಡಿದೆ.
ದೇವಾಲಯದ ಆಡಳಿತ ಮಂಡಳಿಯು ಭಕ್ತರಿಗೆ ಸೇವೆ ನೀಡುವುದಕ್ಕೆ ಯಾವುದೇ ಮದ್ಯವರ್ತಿಗಳನ್ನು ನೇಮಕ ಮಾಡಿಲ್ಲ. ಹಲವು ವರ್ಷಗಳಿಂದ ಭಕ್ತರು ಸರ್ಪ ಸಂಸ್ಕಾರ ಸೇವೆ ನಡೆಸಿಕೊಂಡು ಬಂದಿದ್ದಾರೆ. ಅಲ್ಲದೆ ಆನ್ಲೈನ್ನಲ್ಲಿ ಈ ಸೇವೆ ಮುಂಚಿತವಾಗಿ ಕಾಯ್ದಿರಿಸುವುದಕ್ಕೆ ಅವಕಾಶ ನೀಡಲಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



