ಸಾಲು ಸಾಲು ರಜೆ ಬಂದ್ರೆ ಸಾಕು ಖಾಸಗಿ ಬಸ್ಗಳ ಟೆಕೆಟ್ ದರವನ್ನು ಕೇಳೊ ಹಂಗೇ ಇರುವುದಿಲ್ಲ. ಏಕಾಏಕಿ ಒಮ್ಮೆಗೆ ಟಿಕೆಟ್ ದರವನ್ನು ಡಬಲ್ ಮಾಡಿ ಬಿಡುತ್ತಾರೆ. ಈ ವಾರಾಂತ್ಯ ಮತ್ತು ಸೋಮವಾರ ಗಣರಾಜ್ಯೋತ್ಸವ ರಜೆಯಿಂದ ಸಾಲು ಸಾಲು ರಜೆಗಳು ಬಂದಿವೆ. ಜನರು ಊರುಗಳಿಗೆ ಹೋಗಲು, ಸಂಬಂಧಿಕರನ್ನು ಭೇಟಿಯಾಗಲು ಅಥವಾ ಸಣ್ಣ ಪ್ರವಾಸಕ್ಕೆ ತಯಾರಿ ನಡೆಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಬಸ್ಗಳು ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ.
ಖಾಸಗಿ ಬಸ್ ಮಾಲೀಕರು ಈ ಸಂದರ್ಭವನ್ನು ಬಂಡವಾಳ ಮಾಡಿಕೊಂಡು ಟಿಕೆಟ್ ದರಗಳನ್ನು ಡಬಲ್ ಮಾಡಿದ್ದಾರೆ. ಸಾಮಾನ್ಯ ದಿನಗಳಲ್ಲಿ ಸುಲಭವಾಗಿ ಸಿಗುತ್ತಿದ್ದ ಪ್ರಯಾಣ ಈಗ ದುಬಾರಿಯಾಗಿದೆ. ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಖಾಸಗಿ ಬಸ್ಗಳ ಟಿಕೆಟ್ ದರ ದುಬಾರಿ!
ಬೆಂಗಳೂರಿನಲ್ಲಿ ಕೆಲಸ ಮಾಡುವ ಸಾಮಾನ್ಯ ಕುಟುಂಬದವರಿಗೆ ಖಾಸಗಿ ಬಸ್ಗಳ ಈ ನಡೆ ಭಾರೀ ತೊಂದರೆ ಮಾಡಿದೆ. ಗಣರಾಜ್ಯೋತ್ಸವ ರಜೆ ಮತ್ತು ವೀಕೆಂಡ್ ಒಟ್ಟಿಗೆ ಬಂದಿರುವುದರಿಂದ ತಮ್ಮ ತಮ್ಮ ಊರಿಗೆ ಹೋಗಬೇಕು ಅಂದುಕೊಂಡವರಿಗೆ ಸಮಸ್ಯೆ ಎದುರಾಗಿದೆ. ಸಾಮಾನ್ಯ ದಿನಗಳಲ್ಲಿ ಸ್ಲೀಪರ್ ಬಸ್ ದರ ₹500 ರಿಂದ ₹800, ₹1000 ಇರುವ ರೇಟ್ ಇದೀಗ 2000 ಗಡಿ ದಾಟಿದೆ. ಇದರಿಂದ ರಜೆ ಇದ್ರೂ ತಮ್ಮ ಊರಿಗೆ ಹೋಗಲು ದುಬಾರಿ ವೆಚ್ಚ ಮಾಡಬೇಕಾಗಿದ್ದು, ಹಿಂದೇಟು ಹಾಕ್ತಿದ್ದಾರೆ.
ಹಾಗಾದ್ರೆ ಟಿಕೆಟ್ ದರ ಎಷ್ಟು ಹೆಚ್ಚಾಗಿದೆ?
1. ಬೆಂಗಳೂರು-ಮಂಗಳೂರು
ಸಾಮಾನ್ಯ ದಿನದ ದರ ₹500- ₹800
ಇಂದಿನ ದಿನದ ದರ ₹1400- ₹2000
2. ಬೆಂಗಳೂರು – ಉಡುಪಿ
ಸಾಮಾನ್ಯ ದಿನದ ದರ ₹600- ₹750
ಇಂದಿನ ದಿನದ ದರ ₹1650-₹1699
3. ಬೆಂಗಳೂರು – ಚಿಕ್ಕಮಗಳೂರು
ಸಾಮಾನ್ಯ ದಿನದ ದರ ₹550 ₹600
ಇಂದಿನ ದರ ₹1600-₹1500
4. ಬೆಂಗಳೂರು-ಹಾಸನ
ಸಾಮಾನ್ಯ ದಿನದ ದರ ₹650 ₹850
ಇಂದಿನ ದರ ₹1000-₹1200
5. ಬೆಂಗಳೂರು- ಬೆಳಗಾವಿ
ಸಾಮಾನ್ಯ ದಿನದ ದರ ₹1200 – ₹1300
ಇಂದಿನ ದರ ₹2500-₹3000





