ವೇಣೂರು: ಮೂಡುಕೋಡಿ ಗ್ರಾಮದ ಕೊಪ್ಪದ ಬಾಕಿಮಾರು ಅಂಗನವಾಡಿ ಕೇಂದ್ರದಲ್ಲಿ ಮಳೆಗಾಲದಲ್ಲಿ ಮೇಲ್ಛಾವಣಿ ಸೋರುತ್ತಿದ್ದು, ಅಂಗನವಾಡಿ ಕಾರ್ಯಕರ್ತೆ ಹಾಗೂ ಪೋಷಕರ ಬೇಡಿಕೆಯಂತೆ ಇದೀಗ ಮೇಲ್ಚಾವಣಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಈ ಕಾಮಗಾರಿಗೆ ಇಲಾಖೆಯಿಂದ ರೂ. 1 ಲಕ್ಷ ರೂಪಾಯಿ ಅನುದಾನ ಮಂಜೂರಾಗಿತ್ತು. ಆದರೆ ಮೇಲ್ಛಾವಣಿಗೆ ಮಾಡು ಮಾಡಲಿಕ್ಕೆ ಸುಮಾರು 2.50 ಲಕ್ಷ ರೂಪಾಯಿ ಬೇಕಾಗಿತ್ತು. ಇದನ್ನು ಮನಗಂಡ ನಮ್ಮ ಬಾಲ ವಿಕಾಸ ಸಮಿತಿಯ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಸುಂದರ ಹೆಗ್ಡೆಯವರು ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ವಿಶೇಷ ರೀತಿಯಲ್ಲಿ ಸ್ಪಂದಿಸಿದ ಶಾಸಕರು ಇಂಜಿನಿಯರ್ಗೆ ಕರೆ ಮಾಡಿ ಸುಸಜ್ಜಿತವಾದ ಮೇಲ್ಛಾವಣಿ ಮಾಡನ್ನು ನಿರ್ಮಾಣ ಮಾಡಲಿಕ್ಕೆ ಸೂಚಿಸಿದ್ದರು.






