ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಗಾಂಧಿನಗರ – ಕರಿಮಣೇಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ) ,ಪ್ರಗತಿ ಬಂಧು ಒಕ್ಕೂಟ, ಕರಿಮಣೇಲು
ಸಾಂದೀಪನಿ ಶಿಶು ಮಂದಿರ ಸಮಿತಿ, ಗಾಂಧಿನಗರ ಇವರ ಸಂಯುಕ್ತ ಆಶ್ರಯದಲ್ಲಿ ಪದ್ಮಭೂಷಣ ಡಾ |ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ 35 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಯನ್ನು ದಿನಾಂಕ 04-09-2026 ಶುಕ್ರವಾರ ದಂದು ಸಾಂದೀಪನಿ ಶಿಶು ಮಂದಿರ ಗಾಂಧಿನಗರ ಇಲ್ಲಿ ನಡೆಸಲಾಯಿತು.


ಈ ಕಾರ್ಯಕ್ರಮದ ಉದ್ಘಾಟನೆಯನ್ನು ವೆಂಕಪ್ಪ ಪೂಜಾರಿ ಬೀಡಿ ಕಂಟ್ರಾಕ್ಟರ್ ಕೇಶವನಗರ ಇವರು ನೆರವೇರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಗದೀಶ್ ನಾಯಕ್ ಮೂಂಕಾಡಿ ಅಧ್ಯಕ್ಷರು ಸಾಂದೀಪನಿ ಶಿಶು ಮಂದಿರ ಗಾಂಧಿನಗರ ಇವರು ಉಪಸ್ಥಿತರಿದ್ದರು. ಅನಂತರ ಕೃಷ್ಣನನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರವನ್ನು ಮಾಡಲಾಯಿತು. ಶಿಶುಮಂದಿರದ ಮಕ್ಕಳು ಮದ್ದು ಕೃಷ್ಣನ ವೇಷ ಹಾಗೂ ಅದೃಷ್ಟ ಆಟಗಳನ್ನು ನೆರವೇರಿಸಿದರು .ಅನಂತರ ಸಾರ್ವಜನಿಕ ಮುದ್ದು ಕೃಷ್ಣ ವೇಷ,ಬಾಲಕ ಬಾಲಕಿಯರಿಗೆ,ಪುರುಷ – ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 12.30 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಅಶೋಕ್ ಪೂಜಾರಿ ಬಾಕ್ಯರಡ್ಡ, ಅಧ್ಯಕ್ಷರು ಶ್ರಿ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಉಪಸ್ಥಿತರಿದ್ದರು.
ಧಾರ್ಮಿಕ ಉಪನ್ಯಾಸ ಸಂಜಯ್ ಸಿ . ವಿ ಪ್ರಗತಿಪರ ಕೃಷಿಕರು ಅಂಡಿಂಜೆ .ಮುಖ್ಯ ಅತಿಥಿಯಾಗಿ ಡಾ |ಶರತ್ ಗೋರೆ ಅಧ್ಯಕ್ಷರು ಬ್ರೈಟ್ ಹೋರಿಜೋನ್ ಇಂಟರ್ನ್ಯಾಷನಲ್ ಸ್ಕೂಲ್ ಕರಿಮಣೇಲು,ಮತ್ತು ದೇವಿಪ್ರಸಾದ್ ಸುವರ್ಣ ಶಿಬಿರಾಧಿಕಾರಿ,ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಶ್ರೀಮತಿ ಶಂಭಾಷಿನಿ ಕಾರ್ಯದರ್ಶಿ ಸೇವಾ ಶರಧಿ ವಿಶ್ವಸ್ಥ ಮಂಡಳಿ .ಒಕ್ಕೂಟದ ಅಧ್ಯಕ್ಷರಾದ ಶ್ರೀ ಪ್ರವೀಣ್ ನಾಯ್ಕ, ಶ್ರೀಮತಿ ಶಾಲಿನಿ ಮೇಲ್ವಿಚಾರಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ. ಶ್ರೀಮತಿ ಸುಜಾತಾ ಮೇಲ್ವಿಚಾರಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೇಣೂರು ವಲಯ ಇವರೆಲ್ಲರೂ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ವೇದಿಕೆಯ ಮೇಲಿರುವ ಗಣ್ಯರನ್ನು ಮೇಲ್ವಿಚಾರಕರಾದ ಶ್ರೀಮತಿ ಸುಜಾತಾ ಇವರು ಸ್ವಾಗತಿಸಿದರು.ಹಿಂದಿನ ವರ್ಷದ ವರದಿಯನ್ನು ಸೇವಾಪ್ರತಿನಿಧಿ ಶ್ರೀಮತಿ ಶೋಭಾ ಇವರು ಮಂಡಿಸಿದರು.ಅಷ್ಟಮಿಯ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಶ್ರೀಮತಿ ಶೋಭಾ ಇವರನ್ನು ಕೃಷ್ಣಾಷ್ಟಮಿ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯವಹಿಕೆಯಾದ ಶ್ರೀಮತಿ ಗಿರಿಜಾ ಭಟ್ ಇವರು ನೆರವೇರಿಸಿದರು.ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಶ್ರೀಕೃಷ್ಣಾಷ್ಟಮಿಯ ಕಾರ್ಯದರ್ಶಿಯಾದ ಶ್ರೀಮತಿ ಸಚಿತ ಇವರು ಧನ್ಯವಾದವಿತ್ತರು..



