ಮಂಗಳೂರು, ಅ.29: ಸೌಜನ್ಯ ಪ್ರಕರಣದ ಬಗ್ಗೆ ಎಸ್ಐಟಿಯಿಂದ ಮರು ತನಿಖೆ ಚುರುಕುಗೊಂಡಿದ್ದು, ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭಾಸ್ಕರ್ ರೈ, ಪಿಎಸ್ಐ ಯೋಗೇಶ್, ಅಂದಿನ ಸಿಐಡಿ ಡಿವೈಎಸ್ಪಿ ರುದ್ರಮುನಿ SIT ವಿಚಾರಣೆಗೆ ಹಾಜರಾಗಿದ್ದಾರೆ. ಇನ್ಸ್ಪೆಕ್ಟರ್ ಭಾಸ್ಕರ್ ರೈ ಈ ಹಿಂದೆ ಸೌಜನ್ಯಾ ಕೇಸ್ನ ತನಿಖಾಧಿಕಾರಿಯಾಗಿದ್ದರು. ಮಂಗಳೂರಿನ ಹಳೇ ಡಿಸಿ ಕಚೇರಿ ಕಟ್ಟಡದಲ್ಲಿರುವ ಎಸ್ಐಟಿ ಕಚೇರಿಗೆ ಹಲವು ಫೈಲ್ಗಳ ಸಮೇತ ಇವರು ವಿಚಾರಣೆಗೆ ಹಾಜರಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ರಿಂದ ಮೂವರ ವಿಚಾರಣೆ ನಡೆಸಲಾಗಿದೆ.


