ಹೊಸಂಗಡಿ: ಗ್ರಾಮದ ಬಲ್ಲಂಗೇರಿ ನಿವಾಸಿ ಸತೀಶ್ ಮಡಿವಾಳ ಅವರ ನೂತನ ಗೃಹಪ್ರವೇಶದ ಸಂಭ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಅವರು ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕು ಜಂಯ್ಯಿತುಲ್ ಫಾಲಾಹ್ ಅಧ್ಯಕ್ಷರಾದ ಖಾಲಿದ್ ಪುಲಾಬೆ ಅವರು ಸಾಥ್ ನೀಡಿದರು. ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತನಾಡಿ ಸಂತಸ ವಿನಿಮಯ ಮಾಡಿಕೊಂಡರು. ಇದೇ ವೇಳೆ ರಕ್ಷಿತ್ ಶಿವರಾಂ ಹಾಗೂ ಖಾಲಿದ್ ಪುಲಾಬೆ ಅವರನ್ನು ಕುಟುಂಬದ ಯಜಮಾನ ಸತೀಶ್ ಮಡಿವಾಳ ಅವರು ಶಾಲು ಹೊದಿಸಿ ಗೌರವಿಸಿದರು.




