ಲೋಕೋಪಯೋಗಿ ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದ ರಕ್ಷಿತ್ ಶಿವರಾಂ
ಬೆಳ್ತಂಗಡಿ: ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಬಳಿ ಕಪಿಲ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಯವರ ಟಿಪ್ಪಣಿ ಮೇರೆಗೆ ೨೭೫.೦೦ಲಕ್ಷಗಳ ಅನುದಾನ (ಲೆ.ಶೀ.೫೦೫೪-೦೩-೧೦೧-೦-೦೨-೧೩೨ ಪ್ರಮೂಖ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ) ಬಿಡುಗಡೆಗೆ ಆದೇಶವಾಗಿದ್ದು, ಅದರೆ ಸದ್ರಿ ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಅಂದಾಜು ಮೊತ್ತದಂತೆ ಈ ಕಾಮಗಾರಿಗೆ ೪೯೯.೩೬ ಲಕ್ಷಗಳ ಅನುದಾನ ಬೇಕಾಗಿದೆ. ಹಾಗಾಗಿ ಈ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ಅತೀ ಅವಶ್ಯವಿರುವ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಸಚಿವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಲಿಖಿತ ಮನವಿಯನ್ನು ನೀಡಿದರು.
ತಾಲೂಕಿನ ನಾರಾವಿ-ಪಾಣಾಲು-ಮಾವಿನಕಟ್ಟೆ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ ೦.೮೦ ರಿಂದ ೯.೧೦ರವರೆಗೆ ಅಭಿವೃದ್ಧಿ, ಬದ್ಯಾರು ಸವಣಾಲು ಜಿಲ್ಲಾ ಮುಖ್ಯ ರಸ್ತೆ ಕಿ.ಮೀ ೩.೦೦ ರಿಂದ ೬.೮೦ರವರೆಗೆ ಅಭಿವೃದ್ಧಿ, ದಿಡುಪೆ-ಸಂಸೆ ರಸ್ತೆ ಕಿ.ಮೀ ೦.೦೦ ರಿಂದ ೯. ೦೦ ರವರೆಗೆ ರಸ್ತೆ ಕಾಂಕ್ರಿಟೀಕರಣ ಅಭಿವೃದ್ಧಿ, ಚಾರ್ಮಾಡಿ ಗ್ರಾಮದ ಕುಂಡೊಟ್ಟು ಎಂಬಲ್ಲಿ ಕಾಲುಸಂಕ ರಚನೆ ತೋಟತ್ತಾಡಿ ಗ್ರಾಮದ ದಡ್ಡು ಎಂಬಲ್ಲಿ ಸೇತುವೆ ರಚನೆ ಕಾಮಗಾರಿ, ಬೆಳ್ತಂಗಡಿ ನಗರದಲ್ಲಿ ಲೋ.ಇ ಸಿಬ್ಬಂದಿಗಳ ವಸತಿಗೃಹ ನಿರ್ಮಾಣಕ್ಕೂ ಅನುದಾನ ಒದಗಿಸುವಂತೆ ರಕ್ಷಿತ್ ಶಿವರಾಂ ಮನವಿ ನೀಡಿ ಆಗ್ರಹಿಸಿದರು.





