ಮಹಿಳೆಯೊಬ್ಬರು ಅಡುಗೆ ಮಾಡುತ್ತಿದ್ದಾಗ ಪ್ರೆಶರ್ ಕುಕ್ಕರ್ ಸ್ಫೋಟಗೊಂಡ ಭೀಕರ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದಲ್ಲಿ ನಡೆದ ಈ ದುರಂತ ಅಡುಗೆಮನೆಯ ಸುರಕ್ಷತೆಯ ಕುರಿತು ತೀವ್ರ ಚರ್ಚೆಗೆ ಕಾರಣವಾಗಿದೆ. ಐಎಸ್ಐ ಮಾರ್ಕ್ ಇಲ್ಲದ ಕಳಪೆ ಕುಕ್ಕರ್ಗಳು, ಗ್ಯಾಸ್ಕೆಟ್, ಸೇಫ್ಟಿ ವಾಲ್ವ್ ನಿರ್ಲಕ್ಷ್ಯ, ಸಿಲಿಂಡರ್ ಪಕ್ಕದಲ್ಲೇ ಸ್ಟೌವ್ ಇಡುವುದು ಸ್ಫೋಟಕ್ಕೆ ಕಾರಣವಿರಬಹುದು. ಜೀವ ರಕ್ಷಣೆಗೆ ಬ್ರಾಂಡೆಡ್ ಕುಕ್ಕರ್, ಸಕಾಲಿಕ ನಿರ್ವಹಣೆ ಕಡ್ಡಾಯ.



