ಬಜಿರೆ ಬೆಳ್ತಂಗಡಿ ತಾಲೂಕಿನ ಮುಂಚೂಣಿಯ ಮಾದರಿ ಶಾಲೆ: ತಾರಾಕೇಸರಿ
ವೇಣೂರು: ಮಕ್ಕಳ ಬಗ್ಗೆ ಅತೀವ್ರ ಕಾಳಜಿ ವಹಿಸಿಕೊಂಡು ಬಂದಿರುವ ಇಲ್ಲಿನ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಶಾಲೆಯನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬಂದಿದ್ದಾರೆ. ಜೊತೆಗೆ ಇಲ್ಲಿನ ಸಮಿತಿಗಳು ಶ್ರಮದಿಂದ ಪಿಯಂಶ್ರೀ ಶಾಲೆಯಾಗಿ ಮೇಲ್ದರ್ಜೆಗೇರಲು ಸಹಕಾರಿ ಆಗಿದೆ. ಪೋಷಕರ ಅಭೂತಪೂರ್ವ ಸ್ಪಂದನೆಯಿಂದ ತಾಲೂಕಿಗೆ ಮಾದರಿ ಆಗಿರುವ ಬಜಿರೆ ಶಾಲೆ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಹೇಳಿದರು
ಅವರು ಪಿಎಂಶ್ರೀ ಸ.ಉ.ಪ್ರಾ. ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವೇಣೂರಿನ ಪ್ರಸಿದ್ಧ ವೈದ್ಯರಾದ ಡಾ. ಶಾಂತಿಪ್ರಸಾದ್ ಅವರು ಸಮಾರಂಭವನ್ನು ಉದ್ಘಾಟಿಸಿ,ಒಂದು ಸಾಮಾನ್ಯ ಶಾಲೆಯನ್ನು ಸುಂದರವಾದ ವಾತಾವರಣ ನಿರ್ಮಿಸಿ, ಪಿಯಂಶ್ರೀ ಶಾಲೆಯಾಗಿ ಮೇಲ್ದರ್ಜೆಗೇರಿಸುವಲ್ಲಿ ಶ್ರಮಿಸಿರುವ ಇಲ್ಲಿಯ ಶಿಕ್ಷಕರ ಶ್ರಮ ಶ್ಲಾಘನೀಯ ಎಂದರು.
ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಅಧ್ಯಕ್ಷತೆ ವಹಿಸಿ, ಶುಭ ಹಾರೈದರು. ವೇಣೂರು ಪ್ರಾಥಮಿಕ ಕೃ.ಪ.ಸ. ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿಇ, ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಮಾಜಿ ಸದಸ್ಯ ಕೆ. ವಿಜಯ ಗೌಡ, ಸುರೇಶ್ ಕುಮಾರ್ ಆರಿಗ ಪೆರ್ಮಾಣುಗುತ್ತು, ಗ್ರಾ.ಪಂ. ಸದಸ್ಯ ಅರುಣ್ ಕ್ರಾಸ್ತ, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ಡಾ. ಸಂಧ್ಯಾ ಸುಮನ್ ಜೈನ್ ಮಾರಗುತ್ತು, ವೇಣೂರು-ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್., ವೇಣೂರು ಗ್ರಾ.ಪಂ. ಸದಸ್ಯರಾದ ಸುನೀಲ್ ಕುಮಾರ್, ನೇಮಯ್ಯ ಕುಲಾಲ್, ದಿನೇಶ್ ಪೂಜಾರಿ, ಪುಷ್ಪಾ ಬಿ., ಜಿನ್ನು, ಲೀಲಾವತಿ, ಜಯಂತಿ, ಸುಜಾತ, ವೇಣೂರು ಗ್ರಾ.ಪಂ. ಪಿಡಿಒ ಪ್ರಕಾಶ್, ಸಿಆರ್ಪಿ ಸುಜಯ, ಶಿಕ್ಷಣ ಇಲಾಖೆಯ ಸಿದ್ದಲಿಂಗ, ಮೋಹನ, ವೇಣೂರು ದೇವಸ್ಥಾನದ ಪ್ರಧಾನ ಅರ್ಚಕರಾದ ವಿಷ್ಣುಮೂರ್ತಿ ಭಟ್, ವಾರ್ಷಿಕೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ಶಶಿಕುಮಾರ್ ಇಂದ್ರ, ಅಧ್ಯಕ್ಷ ಲೋಕೇಶ್ ಪೂಜಾರಿ ಕೋರ್ಲೊಡಿ, ಉಪಾಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ, ಎಲ್ಕೆಜಿ-ಯುಕೆಜಿ ಬಿಸಿ ಕಮಿಟಿ ಅಧ್ಯಕ್ಷ ಶಿವಾನಂದ ಗೌಡ, ಎಸ್ಡಿಎಂಸಿ ಸದಸ್ಯರು, ತಾಯಂದಿರ ಸಮಿತಿ, ಎಲ್ಕೆಜಿ-ಯುಕೆಜಿ ಬೆಟರ್ಮೆಂಣಟ್ ಕಮಿಟಿ ಹಾಗೂ ನಮ್ಮ ಶಾಲೆ ನಮ್ಮ ಕೊಡುಗೆ ಪದಾಧಿಕಾರಿಗಳು, ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.
ಶಾಲೆಗೆ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಮುಖ್ಯ ಸಿಕ್ಷಕಿ ಕಮಲಾಜಿ ಎಸ್. ಜೈನ್ ಪ್ರಾಸ್ತಾವಿಸಿ, ವರದಿ ವಾಚಿಸಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ ಕಲ್ಪನೆ ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ನಡೆದ ವಿವಿಧ ಮನೋರಂಜನಾ ಕಾರ್ಯಕ್ರಮ ಮನಸೋರೆಗೊಳಿಸಿತು.
ಧ್ವಜಾರೋಹಣ-ಬಹುಮಾನ ವಿತರಣೆ
ಬೆಳಿಗ್ಗೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ ಕಲ್ಪನೆ ಧ್ವಜಾರೋಹಣ ನೆರವೇರಿಸಿದರು. ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಅಧ್ಯಕ್ಷತೆ ವಹಿಸಿ, ಶಾಲೆಯ ಶಿಕ್ಷಣ ವ್ಯವಸ್ಥೆಯನ್ನು ಕೊಂಡಾಡಿದರು. ಉದ್ಯಮಿ ರಾಘವೇಂದ್ರ ಭಟ್ ಸಮಾರಂಭಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ವೇಣೂರು ಚರ್ಚ್ನ ಧರ್ಮಗುರು ವಂ. ಎಡ್ವಿನ್ ಸತೋಷ್ ಮೋನಿಸ್, ಕಾಶಿನಾಥ್ ಹೆಗ್ಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ಸುಧೀರ್ ಭಂಡಾರಿ, ರಮೇಶ್ ಪೂಜಾರಿ ಪಡ್ಡಾಯಿಮಜಲು, ಹೊಸಪಟ್ಣ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಕಜಿಪಟ್ಟ, ಅಂಗನವಾಡಿ ಶಿಕ್ಷಕಿ ಆರತಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ವಿವಿಧ ಸಾಂಸ್ಕೃತಿಕ ಹಾಗೂ ಆಟೋಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.









