ಮೂಡಬಿದ್ರೆ/ಹೊಸಂಗಡಿ: ಹಾಜಿ ಮಲಂಗ್ ಇಂಟರ್ನ್ಯಾಶನಲ್ ಗರ್ಲ್ಸ್ ಕ್ಯಾಂಪಸ್ ಪಟ್ಟಾಡಿ ಮೂಡುಬಿದಿರೆ ಇದರ ನೂತನ ಕಟ್ಟಡದ ಉದ್ಘಾಟನ ಸಮಾರಂಭವು ಮೇ 9ರಂದು ಬೆಳಿಗ್ಗೆ 10 ಗಂಟೆಗೆ ಹೊಸಂಗಡಿ ಪೆರಿಂಜೆ ಪಟ್ಟಾಡಿಯಲ್ಲಿ ನಡೆಯಲಿದೆ.
ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಅವರು ನೂತನ ಗರ್ಲ್ಸ್ ಕ್ಯಾಂಪಸ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ತ್ವಯಿಬಾ ಮರ್ಕಝ್ ಹಾಜಿ ಮಲಂಗ್ ಕ್ಯಾಂಪಸ್ ಮೂಡಬಿದ್ರೆ ಇದರ ಚೇರ್ಮೆನ್ ಆಗಿರುವ ಹಾಜಿ ಸೈಯ್ಯದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.
ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ. ಜೀವಂಧರ ಕುಮಾರ್, ಅಯ್ಯೂಬ್ ಅಹ್ಮದ್ ಸೌದಿ ಅರೇಬಿಯಾ, ಮಾಜಿ ಸಚಿವ ಬಿ. ರಮಾನಾಥ ರೈ, ಎಂಎ ಗಫೂರ್, ಡಾ. ಯು.ಟಿ. ಇಪ್ತ್ಪಿಕಾರ್ ಆಲಿ, ರಕ್ಷಿತ್ ಶಿವರಾಂ, ಇನಾಯತ್ ಆಲಿ, ಸತೀಶ್ ಕೆ. ಕಾಶಿಪಟ್ಣ, ಧರಣೇಂದ್ರ ಕುಮಾರ್ ಸೇರಿದಂತೆ ಹಲವು ಅತಿಥಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.





