ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಬಿಸಿ ಟ್ರಸ್ಟ್ ಗುರುವಾಯನಕೆರೆ ನಾರಾವಿ ವಲಯದ ನಾರಾವಿ ಕಾರ್ಯಕ್ಷೇತ್ರದ ಶ್ರದ್ಧಾಕೇಂದ್ರದ ಶುಚಿತ್ವ ಕಾರ್ಯಕ್ರಮದಡಿ ಒಕ್ಕೂಟದ ವತಿಯಿಂದ ಇಲ್ಲಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಪ್ರಥಮ ಕರಸೇವೆಯಲ್ಲಿ ಭಾಗವಹಿಸಲಾಯಿತು.
ಊರ ಭಕ್ತಾಧಿಗಳು ಹಾಗೂ ಒಕ್ಕೂಟದ ಫಲಾನುಭವಿಗಳು ಕರಸೇವೆಯಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ರವೀಂದ್ರ ಪೂಜಾರಿ ಬಾಂದೊಟ್ಟು, ಬ್ರಹ್ಮಕಲಶೋತ್ಸವ ಪ್ರಧಾನ ಕಾರ್ಯದರ್ಶಿ ವಿನಯ ಹೆಗ್ಡೆ, ಕಾರ್ಯಾಧ್ಯಕ್ಷರಾದ ಮಹಾವೀರ ಜೈನ್, ಸಮಿತಿ ಸದಸ್ಯರಾದ ಜಗದೀಶ್ ಹೆಗ್ಡೆ, ಯಶೋಧ, ಲಕ್ಷ್ಮಣ ಬಂಗೇರ, ಪ್ರಮುಖರಾದ ನಾರಾಯಣ ಪೂಜಾರಿ, ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕಿ ವಿಶಾಲ ಕೆ., ಸೇವಾಪ್ರತಿನಿಧಿ ರೇಷ್ಮಾ ಉಪಸ್ಥಿತರಿದ್ದರು. ೮೦ ಮಂದಿ ಕರಸೇವೆಯಲ್ಲಿ ಬಾಗವಹಿಸಿದ್ದರು.






