ವೇಣೂರು: ವಿಶ್ವ ಯೋಗ ದಿನದ ಪ್ರಯುಕ್ತ ಇಂದು ಮೂಡುಕೋಡಿ ನಡ್ತಿಕಲ್ಲು ಶ್ರೀ ರಾಮ ಭಜನಾ ಮಂದಿರದ ಸಭಾಭವನದಲ್ಲಿ ೧೩ನೇ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿಇ ಅವರು ನೇರವೇರಿಸಿದರು. ಈ ಸಮಾರಂಭದಲ್ಲಿ ಯೋಗ ತರಬೇತುದಾರರಾದ ಕೃಷ್ಣಾನಂದ ಭಟ್ ಪಚ್ಚೇರಿ, ಮೂಡುಕೋಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ರಾವ್, ಶ್ರೀ ರಾಮ ಭಜನಾ ಮಂಡಳಿಯ ಅಧ್ಯಕ್ಷ ಪ್ರವೀಣ್ ಆಚಾರ್ಯ, ವೇಣೂರು ಗ್ರಾಮ ಪಂಚಾಯತು ಉಪಾಧ್ಯಕ್ಷ ಉಮೇಶ್ನಡ್ತಿಕಲ್ಲು ಹಾಗೂ ಇತರರು ಉಪಸ್ಥಿತರಿದರು



