ಚಿಕ್ಕಬಳ್ಳಾಪುರ, ಜು. 21: ಮದ್ಯ ಕುಡಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳು ಹಾಗೂ ಅವರಿಗೆ ಸಹಕರಿಸಿದ ಓರ್ವ ಮಹಿಳೆಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಜು.17ರ ರಾತ್ರಿ ನಡೆದಿದೆ ಎನ್ನಲಾಗಿದೆ. ಬಾಲಕಿಯನ್ನು ಆಟೋದಲ್ಲಿ ದೇವಸ್ಥಾನಕ್ಕೆ ಎಂದು ಮಹಿಳೆ ಕರೆದುಕೊಂಡು ಬಂದಿದ್ದಳು. ಬಳಿಕ ಆಕೆ ಇಬ್ಬರು ಆರೋಪಿಗಳಿಗೆ ಬಾಲಕಿಯನ್ನು ಒಪ್ಪಿಸಿದ್ದಳು. ನಂತರ ನಿರ್ಮಾಣ ಹಂತದ ಕಟ್ಟಡದಲ್ಲಿ ಬಾಲಕಿಗೆ ಮದ್ಯ ಕುಡಿಸಿ ಇಬ್ಬರು ರಾತ್ರಿ ಇಡೀ ಅತ್ಯಾಚಾರ ಎಸಗಿದ್ದರು. ಬೆಳಗ್ಗೆ ಬಾಲಕಿಯನ್ನು ಮನೆ ಬಳಿ ಬಿಟ್ಟು ಯಾರಿಗಾದ್ರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ರಾತ್ರಿಯೆಲ್ಲ ಮನೆಗೆ ಬಾರದೇ ಬೆಳಗ್ಗೆ ಮನೆಗೆ ಬಂದ ಮಗಳನ್ನ ಅನುಮಾನಗೊಂಡು ಪ್ರಶ್ನಿಸಿದ್ದ ತಾಯಿ ಬಳಿ ಬಾಲಕಿ ಸಂಪೂರ್ಣ ವಿಚಾರವನ್ನ ತಿಳಿಸಿದ್ದಳು.ಇದೀಗ ಅಪ್ರಾಪ್ತೆ ನೀಡಿದ ದೂರಿನ ಮೆರೆಗೆ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.



