ಕರಾವಳಿ ತುಳುನಾಡಿನ ಮಣ್ಣಿನಲ್ಲಿ ಕೃಷಿ ಮತ್ತು ಹೈನುಗಾರಿಕೆಗೆ ಅನಾದಿ ಕಾಲದಿಂದಲೂ ವಿಶೇಷ ಮಹತ್ವವಿದೆ. ಇಲ್ಲಿನ ಕೃಷಿಕರು ಸಾಂಪ್ರದಾಯಿಕ ಉದ್ಯೋಗಗಳ ಜತೆಗೆ ಹೈನುಗಾರಿಕೆಯನ್ನು ತಮ್ಮ ಬದುಕಿನ ಆಧಾರಸ್ತಂಭವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಹೈನುಗಾರಿಕೆ ಸಂಸ್ಕೃತಿಯು ಕೇವಲ ಸ್ಥಳೀಯರಿಗೆ ಮಾತ್ರವಲ್ಲದೆ, ಇಡೀ ದೇಶದ ಯುವ ಸಮುದಾಯಕ್ಕೂ ಮಾದರಿಯಾಗಬಲ್ಲದು ಎಂಬುದಕ್ಕೆ ಹಿಮಾಚಲ ಪ್ರದೇಶದ ಈ ಯುವತಿಯ ಯಶೋಗಾಥೆಯೇ ಕನ್ನಡಿ ಹಿಡಿದಂತಿದೆ.
ಇತಿಹಾಸದಲ್ಲಿ ಓದಿ ಪಡೆದದ್ದು ಸ್ನಾತಕೋತ್ತರ (MA) ಪದವಿ. ಆದರೆ ಆಯ್ಕೆ ಮಾಡಿಕೊಂಡಿದ್ದು, ಹಸು ಸಾಕಾಣಿಕೆ. ಸಾರ್ವಜನಿಕ ಟೀಕೆಗಳಿಂದ ದೃತಿಗೆಡದೇ 14 ಹಸುಗಳನ್ನು ಸಾಕಿ ತಿಂಗಳಿಗೆ ಲಕ್ಷ ರೂಪಾಯಿಗೂ ಅಧಿಕ ಹಣ ಗಳಿಸುತ್ತಿರುವ ಪದವೀಧರ ಯುವತಿಯು ಓದಿ ಕೆಲಸವಿಲ್ಲದೇ ಅಲೆಯುವವರಿಗೆ ಸ್ಪೂರ್ತಿಯಾಗಿದ್ದಾರೆ.
ಉದ್ಯಮಿ ಸಕೀನಾ ಠಾಕೂರ್ ಅವರು ಎಂ.ಎ. ಬಳಿಕ ಇತರರಂತೆ ಸಾಂಪ್ರದಾಯಿಕ ವೃತ್ತಿ ಜೀವನ ಆಯ್ಕೆ ಮಾಡಿಕೊಳ್ಳದೇ ಹೈನುಗಾರಿಕೆಗೆ ಇಳಿದರು. ತಮಗಿದ್ದ ಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಇತರರ ಕೈಯಲ್ಲಿ ಜಾಬ್ ಗಿಟ್ಟಿಸಿಕೊಳ್ಳದೇ, ಸ್ವತಂತ್ರವಾಗಿ, ಸ್ವಾಲಂಬಿಯಾಗಿ ಡೈರಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಸಕೀನಾ ಠಾಕೂರ್ ಅವರು ಹಿಮಾಚಲ ಪ್ರದೇಶದ ಮಂಡಿಯ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ 14 ಹಸುಗಳ ಫಾರ್ಮ್ ನಿಂದ ತಿಂಗಳಿಗೆ ಏನಿಲ್ಲವೆಂದರೂ ಸುಮಾರು 1.25 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅವರ ರೋಚಕ ಕಥೆಯನ್ನು ಲಿಂಕ್ಡ್ ಇನ್ನಲ್ಲಿ ಹಂಚಿಕೊಳ್ಳಲಾಗಿದ್ದು, ಮಹಿಳಾ ನವೋದ್ಯಮಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂಬ ಅನೇಕ ಕಾಮೆಂಟ್ಗಳು ಬಂದಿವೆ.


ಸಾಂಪ್ರದಾಯಿಕ ಉದ್ಯೋಗದತ್ತ ತಿರುಗಿಯೂ ನೋಡದ ಸಕೀನಾ ಠಾಕೂರ್ ಅವರು ಡೈರಿ ವ್ಯವಹಾರದಲ್ಲಿ ಹಣ ಮಾಡುತ್ತಿದ್ದಾರೆ. ನಿತ್ಯ ಹಸುಗಳ ಸಾಕಿ ಸಲಹುವುದು, ಹಾಲಿನ ಬಿಸಿನೆಸ್ ಜತೆ ಕೃಷಿಗೆ ಪೂರಕವಾದ ಕಾರ್ಯಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಮಹಿಳೆ ಉದ್ಯೋಗ ಮಾಡುವುದು ಬಿಟ್ಟು ಹೈನುಗಾರಿಕೆಗೆ ಇಳಿದಿದ್ದಾರೆ ಎಂದು ಸುತ್ತಮುತ್ತಲಿನ ಕೆಲವರು ಕೊಂಕು ಮಾತನಾಡಿದರು, ತಲೆ ಕೆಡಿಸಿಕೊಳ್ಳಲದೇ ಹಿಡಿದ ಕಾಯಕ ಮುಂದುವರಿಸಿದ್ದಾರೆ.

ಬ್ಯಾಂಕ್ ಸಾಲದೊಂದಿಗೆ ವ್ಯವಹಾರ ಆರಂಭ
ಸಕೀನಾ ಠಾಕೂರ್ ಅವರು 2024 ರಲ್ಲಿ ತಮ್ಮೊಂದಿಗಿದ್ದ ₹1.25 ರೂಪಾಯಿ ಉಳಿತಾಯ ಹಣದ ಜೊತೆಗೆ 2 ಲಕ್ಷ ರೂಪಾಯಿ ಬ್ಯಾಂಕ್ ಸಾಲ ಪಡೆದರು. ಅರಂಭದಲ್ಲಿ ಒಂದಷ್ಟು ಹಸುಗಳಿಗೆ ಹೈನುಗಾರಿಕೆ, ಹಾಲಿನ ವ್ಯವಹಾರವನ್ನು ಪ್ರಾರಂಭಿಸಿದರು.
112 ಲೀ. ಹಾಲು ಉತ್ಪಾದನೆ, ಲಕ್ಷಕ್ಕೂ ಅಧಿಕ ಆದಾಯ
ದೃಢ ನಿಶ್ಚಯ, ಕುಟುಂಬ ಬೆಂಬಲ ಮತ್ತು ಆಧುನಿಕ ಕೃಷಿ ಪದ್ಧತಿಗಳೊಂದಿಗೆ, ಅವರು ಕ್ರಮೇಣ ತಮ್ಮ ಹೈನುಗಾರಿಕೆ ಕಾರ್ಯಾಚರಣೆಗಳನ್ನು ವಿಸ್ತರಿಸಿದರು. 2025 ರ ಹೊತ್ತಿಗೆ, ಸಕೀನಾ ಡೈರಿ ಫಾರ್ಮ್ನಲ್ಲಿ 14 ಹೋಲ್ಸ್ಟೈನ್ ಫ್ರೀಸಿಯನ್ ಹಸುಗಳು ಪ್ರತಿದಿನ ಸುಮಾರು 112 ಲೀಟರ್ ಹಾಲಿನ ಉತ್ಪಾದನೆ ಆಗತೊಡಗಿತು. ನಿತ್ಯ ಹಾಲಿನಿಂದಲೇ ಅವರಿಗೆ ಮಾಸಿಕ ಸುಮಾರು 1.25 ಲಕ್ಷ ರೂಪಾಯಿ ಮಾಸಿಕ ಗಳಿಕೆಯನ್ನು ಉತ್ಪಾದಿಸಲಾಗುತ್ತಿದೆ. ಇಂದು ಅವರನ್ನು ನೋಡಿ ಸಣ್ಣ ಪುಟ್ಟ ಸಣ್ಣ ಉದ್ಯಮದಾರರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವವಂತಾಗಿದೆ.
ಮಹಿಳಾ ನೇತೃತ್ವದ ಡೈರಿ ಸಹಕಾರಿ ಸಂಸ್ಥೆ
ಹತ್ತಿರದ ಹಳ್ಳಿಗಳಲ್ಲಿ ಸುಮಾರು 70 ಕುಟುಂಬಗಳನ್ನು ಬೆಂಬಲಿಸುವ ಮಹಿಳಾ ನೇತೃತ್ವದ ಡೈರಿ ಸಹಕಾರಿ ಸಂಸ್ಥೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಹಾಲು ಕರೆಯುವ ಉಪಕರಣಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸಾವಯವ ಗೊಬ್ಬರವಾಗಿ ಹಸುವಿನ ಸಗಣಿ ಬಳಸುವವರೆಗೆ, ಸಾಂಪ್ರದಾಯಿಕ ವ್ಯವಹಾರಗಳು ಆಧುನಿಕ ವಿಧಾನಗಳಿಂದ ಹೇಗೆ ಪ್ರಯೋಜನ ಪಡೆಯಬಹುದು ಎಂಬುದನ್ನು ಹೇಳಿಕೊಡುತ್ತಾರೆ. ಹೈನುಗಾರಿಕೆ ಜೊತೆ ಉಪ ಕಸುಬುಗಳನ್ನು ಮಾಡುತ್ತಿದ್ದಾರೆ. ಉದ್ಯಮಶೀಲತೆ ತಂತ್ರಜ್ಞಾನದ ಸ್ಟಾರ್ಟ್ಅಪ್ಗಳು ಅಥವಾ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಕೆಲವೊಮ್ಮೆ, ಅತ್ಯಂತ ಸಾಂಪ್ರದಾಯಿಕ ಕೈಗಾರಿಕೆಗಳಲ್ಲಿ ಅಸಾಧಾರಣ ಅವಕಾಶಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಯುವ ಉದ್ಯಮಿ ಠಾಕೂರ್ ಅವರು ತೋರಿಸಿಕೊಟ್ಟಿದ್ದಾರೆ ಎಂದು ‘ಮಾರ್ಕೆಟಿಂಗ್ ಗ್ರೋಮ್ಯಾಟಿಕ್ಸ್’ ಲಿಂಕ್ಡ್ ಇನ್ ಹ್ಯಾಂಡಲ್ ಹಂಚಿಕೊಂಡಿದೆ.
