ಮಂಗಳೂರು/ವೇಣೂರು: ಕಣ್ಣಿಗೆ ಬಟ್ಟೆ ಕಟ್ಟಿ ಕೇವಲ ಎರಡು ನಿಮಿಷಗಳಲ್ಲಿ ರೂಬಿಕ್ಸ್ ಕ್ಯೂಬ್ (Rubik’s Cube) ಒಗಟನ್ನು ಬಿಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ (India Book of Records) ವೇಣೂರಿನ ಪ್ರತಿಭಾವಂತ ಬಾಲಕ ಮಾ. ಸೋಹಂ ಜೆ. ಕಾರಂತ್ ಅವರು ದಾಖಲೆ ಬರೆದು ಹೊಸ ಮೈಲಿಗಲ್ಲು ಸೃಷ್ಠಿಸಿದ್ದಾರೆ.


ಇವರು ದಿವ್ಯದೃಷ್ಟಿಯಿಂದ 2 ನಿಮಿಷ 19 ಸೆಕೆಂಡುಗಳಲ್ಲಿ 2 ರೂಬಿಕ್ ಕ್ಯೂಬ್ ಜೋಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಸೃಷ್ಠಿಸಿದ್ದಾರೆ.
ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಯುವ ಪ್ರತಿಭೆಗಳು ಸಾಧನೆಯ ಶಿಖರಕ್ಕೇರಬಹುದು ಎಂಬುದಕ್ಕೆ ಸೋಹಂ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಲಾಗಿದೆ.
ಸೋಹಂ ವೇಣೂರು ಶ್ರೀನಿಧಿ ಎಂಟರ್ ಪ್ರೈಸಸ್ನ ಮಾಲಕ ಪಿ. ಜಗದೀಶ್ ಭಟ್ ಮತ್ತು ಶ್ರೀಮತಿ ಶ್ವೇತಾ ಅವರ ಪುತ್ರ.

ಇವರನ್ನು ದ.ಕ. ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸೋಹಂ ಅವರ ಹೆತ್ತವರಾದ ಪಿ. ಜಗದೀಶ್ ಭಟ್ ಮತ್ತು ಶ್ರೀಮತಿ ಶ್ವೇತಾ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ಪ್ರಶಾಂತ್ ಗೌಡ ಇದ್ದರು.
