ಬೆಳ್ಮಣ್ : ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಬೆಳ್ಮಣ್ ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಘಾಟನ ಕಾರ್ಯಕ್ರಮವು ನ. 16ರಂದು ಕುಲಾಲ ಭವನ ನಾನಿಲ್ತಾರ್ ಮುಲ್ಲಡ್ಕ ಮುಂಡ್ಕೂರು ಇಲ್ಲಿ ಜರಗಿತು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ದೀಪ ಪ್ರಜ್ವಲನೆಗೊಳಿಸಿ ಆಶೀರ್ವಚನ ನೀಡಿದ ಅವರು, ಜಾತಿ ಭೇದಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣಬೇಕು, ಬೇರೆ ಸಮುದಾಯಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು ಮತ್ತು ದೇವಸ್ಥಾನಕ್ಕೆ ಹೋಗುವುದರಿಂದ ಮಾತ್ರ ಶುದ್ದತೆ ಬರುವುದಿಲ್ಲ, ಮೊದಲು ಮನಸ್ಸನ್ನು ಶುದ್ಧವಾಗಿವಂತೆ ಭಕ್ತಾಭಿಮಾನಿಗಳಿಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷರಾದ ಕುಶ ಆರ್. ಮೂಲ್ಯ ಇನ್ನಾ ವಹಿಸಿ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮುಂದೆಯೂ ಸಹಕಾರ ಕೋರಿದರು. ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉದಯ ಶೆಟ್ಟಿ ಮುನಿಯಾಲ್ ಉಪಾಧ್ಯಕ್ಷರು ಜಿಲ್ಲಾ ಗ್ಯಾರಂಟಿ ಸಮಿತಿ, ಶೋಧನ ಕುಮಾರ್ ಶೆಟ್ಟಿ ಕಟ್ಟಡ ಮಾಲಿಕರು (ಸೂರಜ್ ಹಿಲ್ಸ್), ಪ್ರಭಾಕರ್ ಕುಲಾಲ್ ವಲಯ ಅರಣ್ಯಾಧಿಕಾರಿ ಕಾರ್ಕಳ, ಸೊಸೈಟಿ ಉಪಾಧ್ಯಕರಾದ ಜಗನ್ನಾಥ ಮೂಲ್ಯ, ಜಯರಾಮ್ ಕುಲಾಲ್ ಅಧ್ಯಕ್ಷರು ಕುಲಾಲ ಸಂಘ ನಾನಿಲ್ತರ್, ರಘು ಮೂಲ್ಯ ಅಧ್ಯಕರು ಕುಲಾಲ ಸಂಘ ಮುಂಬೈ, ಗಣೇಶ್ ಕುಲಾಲ್ ಬೋಳ ಅಧ್ಯಕ್ಷರು ಕುಲಾಲ ಸಂಘ ಬೋಳ, ವಿಠಲ ಮೂಲ್ಯ ಬೇಲಾಡಿ ಅಧ್ಯಕರು ಕುಲಾಲ ಸಂಘ ಕಾಂತಾವರ, ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೊರಿಬೆಟ್ಟುಗುತ್ತು ಸುರೇಂದ್ರ ಶೆಟ್ಟಿ, ಸ್ವಸಹಾಯ ಸಂಘದ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಉಷಾ ಸುರೇಂದ್ರ ಕುಲಾಲ್, ಶ್ರೀಮತಿ ಪವಿತ್ರ ಗಿರೀಶ್, ಶ್ರೀಮತಿ ಚಂದ್ರಾವತಿ ಇನ್ನಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸತೀಶ್ ಹೊಸ್ಮಾರ್ ಅವರು ನಿರ್ವಹಿಸಿದ್ದು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬ್ರಿಜೆಶ್ ಕುಲಾಲ್ ಧನ್ಯವಾದ ಸಲ್ಲಿಸಿದರು. ಸಿಬ್ಬಂದಿ ವರ್ಗ ಸಹಕರಿಸಿದರು.
ಗೌರವ ಸನ್ಮಾನ
ಕಾರ್ಯಕ್ರಮದಲ್ಲಿ ಸ್ವ ಸಹಾಯ ಸಂಘದ ಸದಸ್ಯರ ಪ್ರತಿಭಾವಂತರ ಮಕ್ಕಳನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾಂತಾವರ ಗ್ರಾಮದ ಕು. ಧನ್ಯಾ ಮೂಲ್ಯ, ಬಾರಾಡಿ ಗ್ರಾಮದ ಕು. ಸೃಜನಾ ಕುಲಾಲ್, ಇನ್ನಾ ಗ್ರಾಮದ ಕು. ಮಣಿಶ್ರೀ, ಬೋಳ ಗ್ರಾಮದ ಕು. ಕುಷಿ ಎಸ್. ಕುಲಾಲ್, ಮುಲ್ಲಡ್ಕ ಗ್ರಾಮದ ಕು. ಪಲ್ಲವಿ ಸಾಲ್ಯಾನ್, ಬೆಳ್ಮಣ್ ಗ್ರಾಮದ ಕು. ಶ್ರಾವ್ಯ ಕುಲಾಲ್, ಬೆಳ್ಮಣ್ ಗ್ರಾಮದ ಅಧೀಶ್ ಮೂಲ್ಯ, ಇನ್ನಾ ಗ್ರಾಮದ ದೀಕ್ಷಿತ್ ಕುಲಾಲ್, ಬೆಳ್ಮಣ್ ಗ್ರಾಮದ ಕು. ಕೃತಿ ಕುಲಾಲ್ ಮತ್ತು ಮುಂಡ್ಕೂರು ಗ್ರಾಮದ ಶಾಂತಿ ಹರೀಶ್ ಕುಲಾಲ್ ಸೇರಿದಂತೆ ಒಟ್ಟು ಹತ್ತು ಮಂದಿಗೆ ಗೌರವಪೂರ್ವಕವಾಗಿ ಸನ್ಮಾನ ನೆರವೇರಿಸಲಾಯಿತು. . ಬೆಳ್ಮಣ್ ಗ್ರಾಮದ ಪ್ರಕೃತಿ ಸ್ವಸಹಾಯ ಸಂಘ, ಮುಂಡ್ಕೂರು ಗ್ರಾಮದ ನವಶಕ್ತಿ ಸ್ವಸಹಾಯ ಸಂಘ, ಹಾಗೂ ಬೆಳ್ಮಣ್ ಗ್ರಾಮದ ವನದುರ್ಗ ಸ್ವಸಹಾಯ ಸಂಘ ಎನ್ನುವ ಈ ಮೂರು ಸಂಘಗಳು ಪ್ರಶಸ್ತಿಗೆ ಪಾತ್ರವಾದವು.









