ಮಂಗಳೂರು: ಕುಲಾಲ ಸಂಘ (ರಿ.) ಕೊಲ್ಯ ಇದರ ವತಿಯಿಂದ, ಸೇವಾದಳ ಮತ್ತು ಮಹಿಳಾ ಘಟಕದ ಸಹಯೋಗದಲ್ಲಿ ಕುಲಾಲ ಕ್ರೀಡೋತ್ಸವವು ಮೇ 17ರಂದು ಕೊಲ್ಯ ಸೋಮೇಶ್ವರದ ಶ್ರೀರಾಮ ಫ್ರೆಂಡ್ಸ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8-00 ಗಂಟೆಯಿಂದ ನಡೆಯಲಿದೆ.
ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸುಮಿತ್ ಸೋರ್ನಾಡ್, ಕಿಶೋರ್ ಕಣ್ವತೀರ್ಥ, ಶಶಾಂಕ್, ಸುನಿಲ್ ತೇವುಲ, ರಕ್ಷಿತ್ ಪಾವೂರು, ದೀಕ್ಷಿತ್ ಹಾಗೂ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊಲ್ಯ ಕುಲಾಲ ಸಂಘದ ವ್ಯಾಪ್ತಿಯ 14 ಗ್ರಾಮಗಳ ಸ್ವಜಾತಿ ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷರಾದ ಲ. ಅನಿಲ್ದಾಸ್, ಮಹಿಳಾ ಘಟಕದ ಅಧ್ಯಕ್ಷೆ ಹರಿಣಾಕ್ಷಿ ಕೊಲ್ಯ ಹಾಗೂ ಸೇವಾದಳಪತಿ ಉದಯ ಬಾಕಿಮಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





