ಮಂಗಳೂರು: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸದ್ದಿಲ್ಲದೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೊಂದಿಗೆ ವಿಲೀನಗೊಂಡಿದ್ದು, ಬ್ಯಾಂಕ್ ಹೆಸರು ಬದಲಾವಣೆ ಹಾಗೂ ಐಎಫ್ಎಸ್ಸಿ ಕೋಡ್ ಬದಲಾವಣೆಯಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಯಿತು.
(ಕೆವಿಜಿಬಿ) ಧಾರವಾಡದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಆಗಿತ್ತು. ಇದನ್ನು ಮೇ ೧, ೨೦೨೫ ರಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ನೊಂದಿಗೆ ವಿಲೀನಗೊಳಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅನ್ನು ರಚಿಸಲಾಯಿತು. ಆದರೆ ಗ್ರಾಹಕರಿಗೆ ಮಾಹಿತಿಯ ಕೊರತೆಯಿಂದ ಹಲವಾರು ಸಮಸ್ಯೆ ಎದುರಿಸದ್ದಾರೆ. ಏಕಾಏಕಿ ಖಾತೆದಾರರ ಡಿಜಿಟಲ್ ಪಾವತಿಗಳು ಬ್ಲಾಕ್ ಆಗಿದ್ದವು. ಐಫ್ಎಸ್ಸಿ ಕೋಡ್ ಬದಲಾವಣೆಯಿಂದ ತೊಂದರೆ ಅನುಭವಿಸುತ್ತಿದ್ದ ಗ್ರಾಹಕರು ಕೊನೆಗೆ ಬ್ಯಾಂಕ್ ಸಂಪರ್ಕಿಸಿದಾಗ ಹೆಸರು ಬದಲಾವಣೆ ಆಗಿ ಸಮಸ್ಯೆ ಆಗಿರುವುದು ಗೊತ್ತಾಗಿದೆ.
ಇದು ಗ್ರಾಮೀಣ ಬಳಕೆದಾರರಿಗೆ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿತ್ತು.
ವಿಲೀನ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಲೀನಗೊಂಡು ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂದು ಕರೆಯಲ್ಪಡುತ್ತದೆ. ಈ ವಿಲೀನವು ಮೇ ೧, ೨೦೨೫ ರಂದು ಜಾರಿಗೆ ಬಂದಿತು.
ಇದು ಬರೋಬ್ಬರಿ ನಾಲ್ಕು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನದ ಮೂಲಕ ರೂಪುಗೊಂಡಿತು: ಮಲಪ್ರಭಾ ಗ್ರಾಮೀಣ ಬ್ಯಾಂಕ್, ನೇತ್ರಾವತಿ ಗ್ರಾಮೀಣ ಬ್ಯಾಂಕ್, ಬಿಜಾಪುರ ಗ್ರಾಮೀಣ ಬ್ಯಾಂಕ್ ಮತ್ತು ವರದಾ ಗ್ರಾಮೀಣ ಬ್ಯಾಂಕ್.









