ವೇಣೂರು: ಸಹಕಾರ ರತ್ನ ಪುರಸ್ಕೃತ ಸತೀಶ್ ಕೆ. ಕಾಶಿಪಟ್ಣ ಅವರಿಗೆ ಹುಟ್ಟೂರ ಅಭಿನಂದನ ಕಾರ್ಯಕ್ರಮ ಇಂದು ಸಂಜೆ ಕಾಶಿಪಟ್ಣದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಸತೀಶ್ ಕೆ. ಕಾಶಿಪಟ್ಣ ದಂಪತಿಯವರನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು. ಕಟೀಲು ಕ್ಷೇತ್ರದ ಅನಂತ ಪದ್ಮನಾಭ ಅಸ್ರಣ್ಣ ಆಶೀರ್ವಚನ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅಧ್ಯಕ್ಷತೆ ವಹಿದ್ದರು.
ಮಾಜಿ ಸಚಿವ ಬಿ. ರಮಾನಾಥ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ಪದ್ಮರಾಜ್ ಆರ್., ಹನೀಫ್ ಹಾಜಿ, ಪ್ರವೀಣ್ ಕುಮಾರ್ ಜೈನ್, ನಾಗೇಶ್ ಕುಮಾರ್ ಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್, ಪ್ರವೀಣ್ ಕುಮಾರ್ ಜೈನ್ ಅಧ್ಯಕ್ಷರು, ಪ್ರಾ.ಕೃ.ಪ.ಸ. ಸಂಘ ಶಿರ್ತಾಡಿ, ಮೂಡುಬಿದಿರೆ,, ನಾರಾಯಣ ಪಿ.ಎಂ. ನಿಶ್ಮಿತಾ ಟವರ್
ಚಿಂತನ್ ಲೋಬೋ ಶಿರ್ತಾಡಿ,ರಿಚರ್ಡ್ ಜಾರ್ಜ್ ಪಿಂಟೋ ಕುವೈಟ್ ಉದ್ಯಮಿ, ಕೆರಾಡಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಹೇಮಾ, ಕಾಶಿಪಟ್ಣ ಗ್ರಾ.ಪಂ. ಉಪಾಧ್ಯಕ್ಷೆ ಶುಭವಿ, ಪೆರಾಡಿ ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷರ ಶ್ರೀಪತಿ ಉಪಾಧ್ಯಾಯ
ಕಾಶಿಪಟ್ಣ ಶಾಲಾ ಮುಖ್ಯ ಶಿಕ್ಷಕಿ ವ್ರಂದಾ ಪಿಎಸ್., ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ ಕುಕ್ಕೇಡಿ, ಪಿ.ಕೆ. ರಾಜು ಪೂಜಾರಿ, ಜಗದೀಶ್ಚಂದ್ರ ಡಿಕೆ, ಬೆಳ್ತಂಗಡಿ ಗುರುದೇವ ಬ್ಯಾಂಕ್ ಅಧ್ಯಕ್ಷ ನ್ಯಾಯವಾದಿ ಭಗೀರಥ ಜಿ., ಕರ್ನಾಟಕ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶ್ರೀಮತಿ ಶಾಲೆಟ್ ಪಿಂಟೋ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೆಡಿಪಿ ಸದಸ್ಯರಾದ ಸಂತೋಷ್, ಮೂಡಾ ಅಧ್ಯಕ್ಷ ಬೇಬಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಕಾಶಿಪಟ್ಣ ಸ.ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಅಭಿನಂದನ ಸಮಿತಿ ಕಾರ್ಯದರ್ಶಿ ಮನೋಜ್ ಕಾಶಿಪಟ್ಣ ಪ್ರಾಸ್ತಾವಿಸಿ, ಸ್ವಾಗತಿಸಿದರು.






