ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಹುಟ್ಟುಹಬ್ಬ
ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಹಿನ್ನೆಲೆಯಲ್ಲಿ ಗುಂಡೂರಿ ಶೌರ್ಯ ವಿಪತ್ತು ಘಟಕದ ಸದಸ್ಯರು ಗುಂಡೂರಿಯ ಶ್ರೀ ಗುರುಚೈತನ್ಯ ಸೇವಾಶ್ರಮಕ್ಕೆ ಭೇಟಿ ನೀಡಿ ಆಶ್ರಮವಾಸಿಗಳಿಗೆ ಹಂಪಲು ವಿತರಣೆ ಮಾಡಿದರು.
ಇದಕ್ಕೂ ಮೊದಲು ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಘಟಕದ ಸದಸ್ಯರು ಡಾ. ಹೆಗ್ಗಡೆಯವರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.

ವಲಯ ಮೇಲ್ವಿಚಾರಕಿ ವೀಣಾ ಕುಮಾರಿ, ಬಜಿರೆ-ಗುಂಡೂರಿ ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು, ಹೊಕ್ಕಾಡಿಗೋಳಿಯ ದಿನೇಶ್ ಪೂಜಾರಿ, ಆರಂಬೋಡಿಯ ಶ್ರೀಮತಿ ಪ್ರಣೀತಾ, ಹೊಸಂಗಡಿಯ ಶ್ರೀಮತಿ ಪ್ರತೀಮಾ, ಆರಂಬೋಡಿ ಒಕ್ಕೂಟದ ಅಧ್ಯಕ್ಷ ಹರೀಶ್ ಆಚಾರ್ಯ, ಗುಂಡೂರಿ ಒಕ್ಕೂಟದ ಸದಾನಂದ ಪೂಜಾರಿ, ಕಾಶಿಪಟ್ಣ ಒಕ್ಕೂಟದ ಅಧ್ಯಕ್ಷ ಸಂಜೀವ ಪೂಜಾರಿ, ಹೊಕ್ಕಾಡಿಗೋಳಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಉಗ್ಗಪ್ಪ ಕುಲಾಲ್, ಶೌರ್ಯ ವಿಪತ್ತು ತಂಡದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.









