ಮರೋಡಿ: ಗ್ರಾಮದ ಹಾರೊದ್ದು ನಿವಾಸ ದಿ. ಸಾಧು ಪೂಜಾರಿ ಅವರ ಪತ್ನಿ ಗೀತಾ ಪೂಜಾರಿ (54) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಕೃಷಿಕರಾಗಿದ್ದ ಗೀತಾ ಅವರು ಪುತ್ರಿಯರಾದ ಶ್ವೇತಾ ಯಶವಂತ್, ವಿಜೇತಾ ಸುನಿಲ್, ಅಳಿಯಂದಿರು, ಮೊಮ್ಮಗ, ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ನಡೆಯಿತು.





