ಚೆನ್ನಮ್ಮ ದೇವೇಗೌಡ ನಿಧನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ (85) ಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜಕೀಯವಾಗಿ ಸದಾ ಬ್ಯುಸಿಯಾಗಿದ್ದ ದೇವೇಗೌಡರ ಸಂಸಾರದ ಬೆನ್ನೆಲುಬಾಗಿದ್ದ ಗಟ್ಟಿಗಿತ್ತಿ ಇಹಲೋಕ ತ್ಯಜಿಸಿದ್ದಾರೆ. ಕೆಲ ವರ್ಷಗಳಿಂದಲೂ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದ ಹಿನ್ನೆಲೆ ಜುಲೈ 15ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.