ಅಳದಂಗಡಿ: ಯೋಜನೆ ಮತ್ತು ಸಾಂಖಿಕ ಸಚಿವರಾಗಿದ್ದ ಡಿ. ಸುಧಾಕರ ಅವರ ಅಗಲುವಿಕೆಯ ವಿಷಯ ತಿಳಿದು ದುಖಃವಾಯಿತು. ವೇಣೂರಿನ ಎರಡು ಮಹಾಮಸ್ತಕಾಭಿಷೇಕಕ್ಕೆ ಸಚಿವರು ಉತ್ತಮ ಸಹಕಾರ ನೀಡಿದ್ದರು. ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಯ ಒಲವು ಹೊಂದಿದ್ದ ಸಚಿವರು ರಾಜಕೀಯವಾಗಿಯೂ ಉತ್ತಮವಾಗಿ ಸೌಹಾರ್ದಯುತ ಸಂಪರ್ಕವನ್ನು ಇಟ್ಟುಕೊಂಡು ತಮ್ಮ ಕ್ಷೇತ್ರದಲ್ಲಿ ಉತ್ತಮ ಸೇವಾಕಾರ್ಯಗಳನ್ನು ಮಾಡಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಕುಟುಂಬಸ್ಥರಿಗೆ ಅವರ ಅಗಲುವಿಕೆಯಿಂದ ಉಂಟಾದ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ.
ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು, ಅಳದಂಗಡಿ ಅರಮನೆ





