ವೇಣೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಎನ್. ವಿನಯ್ ಹೆಗ್ಡೆ ಅವರು ಜನವರಿ 1 ರಂದು ನಿಧನರಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಸಂತಾಪ ಸೂಚಿಸಿದ್ದಾರೆ.
ವಿನಯ್ ಹೆಗ್ಡೆ ಅವರು ಓರ್ವ ದಾರ್ಶನಿಕ ಶಿಕ್ಷಣ ತಜ್ಞರು, ದಕ್ಷ ಆಡಳಿತಗಾರರು ಮತ್ತು ಉನ್ನತ ಶಿಕ್ಷಣ ಹಾಗೂ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಉದಾತ್ತ ವ್ಯಕ್ತಿತ್ವದವರು ಎಂದು ಡಾ. ಅಜಿಲರು ಸ್ಮರಿಸಿದ್ದಾರೆ.
ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದಿರುವ ಅಜಿಲರು, ವಿನಯ್ ಹೆಗ್ಡೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೆ, ಸಂಬಂಧಿಕರಿಗೆ ಮತ್ತು ಇಡೀ ನಿಟ್ಟೆ ಶಿಕ್ಷಣ ಸಂಸ್ಥೆಯ ಸಮುದಾಯಕ್ಕೆ ನೀಡಲಿ ಎಂದಿದ್ದಾರೆ.






