ಮಂಗಳೂರು: ಕೊಲ್ಯ ಕುಲಾಲ ಸಂಘ ಇದರ ೬೧ನೇ ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವದ ಸಮಾರೋಪ ಸಮಾರಂಭವು ಕೊಲ್ಯ ಕುಲಾಲ ಸಂಘ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಲ. ಅನಿಲ್ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮನೋಜ್ ಕುಲಾಲ್ ಮೈಸೂರು, ನಾಗೇಶ್ ಸೌತಡ್ಕ ಫರ್ನಿಚರ್ ಮಾಲಕರು, ಕಿರಣ್ ಅಟ್ಲುರ್ ವೀರನಾರಾಯಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರು, ಕರುಣಾಕರ ಮುಂಬೈ, ಶಿವಪ್ರಸಾದ್ ಕುಂಪಲ, ಪುರುಷೋತ್ತಮ್ ಚೆಂಡ್ಲಾ, ಮಹಿಳಾ ಉಪಾಧ್ಯಕ್ಷರಾದ ಹರಿಣಾಕ್ಷಿ ಕೊಲ್ಯ, ಸೇವಾದಳಪತಿ ಉದಯ್ ಕುತ್ತಾರ್ ಉಪಸ್ಥಿತರಿದ್ದರು.

ಸಂಘದ ಕಾರ್ಯಾಲಯ ಉದ್ಘಾಟನೆ
ದಿ. ಸುಬ್ಬಯ್ಯ ಕುಂಪಲ ಹಾಗೂ ದಿ. ರಾಧಾ ಕುಂಪಲ ಸ್ಮರಣಾರ್ಥ ಅವರ ಮಕ್ಕಳ ಕೊಡುಗೆಯಾಗಿ ಉದ್ಘಾಟಿಸಲಾಯಿತು. ಜಯಂತ್ ಸಂಕೋಳಿಗೆ ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಹಾಗೂ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ನಡೆಯಿತು. ಬಳಿಕ ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ, ನಡೆದು ವಿಜೇತರಿಗೆ ನಗದು ಮತ್ತು ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ರಂಜಿತ್ ಉಚ್ಚಿಲ್, ಪ್ರಕಾಶ್ ಪಿಲಿಕೂರು, ಭಾಸ್ಕರ್ ಕುತ್ತಾರ್, ರಾಜೀವಿ ಕೆಂಪುಮಣ್ಣು, ಸುಲೋಚನಾ ಟೀಚರ್, ಜಯಶ್ರೀ ಪ್ರಪುಲ್ಲ, ನಾರಾಯಣ ದೇವಿಪುರ, ಪ್ರಭ ಹರೇಕಳ ರವಿ, ಕಾಯರ್ ಮಜಲ್, ಕಿಶೋರ್ ಕುತ್ತಾರ್, ರಘುಪತಿ ಕುತ್ತಾರ್ ಹರೀಶ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.





