ಇಂತಹ ಸರಕಾರಿ ಶಿಕ್ಷಣ ಸಂಸ್ಥೆಗಳು ನನ್ನ ಕ್ಷೇತ್ರ ಹೆಮ್ಮೆ: ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಹಾಗೂ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಕಾಲೇಜು ವಾರ್ಷಿಕೋತ್ಸವ ಸಮಾರಂಭವು ಡಿ. 1ರಂದು ಕಾಲೇಜು ಆವರಣದಲ್ಲಿ ನೆರವೇರಿತು.
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಇವರು ಕಾಲೇಜು ವಾರ್ಷಿಕೋತ್ಸವವನ್ನು ಉದ್ಘಾಟಿಸಿ, ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಇಂತಹ ಸರಕಾರಿ ಶಿಕ್ಷಣ ಸಂಸ್ಥೆಗಳು ನನ್ನ ಕ್ಷೇತ್ರದಲ್ಲಿರುವುದು ಹೆಮ್ಮೆಯ ವಿಚಾರ. ಉತ್ತಮ ಫಲಿತಾಂಶ ಕಾಯ್ದುಕೊಳ್ಳಿ ಎಂದು ತಿಳಿಸಿ ಉಪನ್ಯಾಸಕ ವೃಂದವನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸುಕುಮಾರ್ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಯಾನಂದ ಗೌಡ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಚರಣ್ ಕೆ, ಎ ಆರ್ ಟಿ ಓ ಬಂಟ್ವಾಳ, ರಾಜೇಶ್ ಪೈ, ಮಾಲಕರು ಸಂಧ್ಯಾ ಟ್ರೇಡರ್ಸ್ ಉಜಿರೆ, ಶ್ರೀಮತಿ ತಾರಕೇಸರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳ್ತಂಗಡಿ, ಬಿ.ಕೆ ಧನಂಜಯ್ ರಾವ್ ಖ್ಯಾತ ನ್ಯಾಯವಾದಿಗಳು ಬೆಳ್ತಂಗಡಿ, ರೋನಾಲ್ಡ್ ಲೋಬೊ ಮಾಲಕರು ಟಿವಿಎಸ್ ಮೋಟಾರ್ಸ್ ಬೆಳ್ತಂಗಡಿ, ಸೂರಪ್ಪ ಕಾರ್ಯಧ್ಯಕ್ಷರು ಪ್ರೌಢಶಾಲಾ ಅಭಿವೃದ್ಧಿ ಸಮಿತಿ, ಶ್ರೀಮತಿ ಪೂರ್ಣಿಮಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಪದ್ಮ ಕುಮಾರ್ ನಿವೃತ್ತ ಕಂದಾಯ ನಿರೀಕ್ಷಕರು, ಕಾಲೇಜು ಅಭಿವೃದ್ಧಿ ಸಮಿತಿಯ ವಾಮನ ಆಚಾರ್ಯ ವಿದ್ಯಾರ್ಥಿ ನಾಯಕರುಗಳಾದ ಕುಮಾರ್ ವೈಭವ ಆಚಾರ್ಯ, ಪ್ರಕೃತಿ, ಸಂಜನಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶೀನಾ ನಾಡೋಳಿ ನಿರ್ದೇಶನದ ವೈದೇಹಿ ವಿರಚಿತ (ಮೂಲ ಶೇಕ್ಸ್ ಪಿಯರ್) ನಾಟಕ ಧಾಂ ಧೂಮ್ ಸುಂಟರಗಾಳಿ ಎಂಬ ನಾಟಕವು ಕಾಲೇಜು ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಆನಂದ ಡಿ. ಇತಿಹಾಸ ಉಪನ್ಯಾಸಕರು ಸ್ವಾಗತಿಸಿದರು. ಶ್ರೀಮತಿ ಪೂರ್ಣಿಮಾ ಕೆ.ಕೆ. ಕನ್ನಡ ಅಧ್ಯಾಪಕರು ಧನ್ಯವಾದ ಸಲ್ಲಿಸಿದರು. ಡಾ. ಗಣೇಶ ರಾಮಚಂದ್ರ ಭಟ್ ಕನ್ನಡ ಉಪನ್ಯಾಸಕರು ಹಾಗೂ ಸುರೇಶ್ ಗಣಿತ ಅಧ್ಯಾಪಕರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಹೆತ್ತವರು ಭಾಗವಹಿಸಿದ್ದರು.









