ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕದಾರರ ಕ್ಷೇಮಾಭಿವೃದ್ಧಿ ಸಂಘ (ರಿ.) ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲೆಯ ಕೋಳಿ ಸಾಕಣಿಕೆದಾರರ ಸಮಾಲೋಚನಾ ಸಭೆಯು ಇಂದು ರವಿವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಸಭಾಂಗಣದಲ್ಲಿ ನಡೆಯಿತು.

ಸುಮಾರು 35ಕ್ಕೂ ಹೆಚ್ಚು ಸಾಕಾಣಿದಾರರ ಸಹಬಾಗಿತ್ವದಲ್ಲಿ ನಡೆದ ಸಭೆಯಲ್ಲಿ ಪ್ರಮುಖರಾದ ಪಕಾಶ್ ಪರಾರಿ, ನಾರಾಯಣ ಪೂಜಾರಿ ಉಚ್ಚೂರು, ಗುರುಪ್ರಶಾಂತ್ ಸುದೆಕಾರ್, ರವಿಚಂದ್ರ ಶೆಟ್ಟಿ ಆಯುಷ್ ಫಾರ್ಮ್ ಸಂತೋಷ್ ಬೆಳಾಲ್ ಇವರುಗಳ ಮಾರ್ಗದರ್ಶನದಲ್ಲಿ ಕೋಳಿ ಸಾಕಾಣಿಕೆ ವೆಚ್ಚವನ್ನು ಕನಿಷ್ಠ ರೂ. 10 ಮಾಡಲು ರಾಜ್ಯಾಧ್ಯಕ್ಷರಾದ ಚಂದ್ರಶೇಖರ ಇವರ ನೇತೃತ್ವದಲ್ಲಿ ಹೋರಾಟಕ್ಕೆ ಎಲ್ಲರೂ ಸೇರುವುದೆಂದು ಒಕ್ಕೊರಲ ಸಹಮತದಿಂದ ತೀರ್ಮಾನಿಸಲಾಯಿತು.

ಸಮಾಲೋಚನೆ ಸಭೆಯಲ್ಲಿ ತುಳುನಾಡ ಕೋಳಿ ಸಾಕಾಣಿಕ ಒಕ್ಕೂಟದ ಉಪಾಧ್ಯಕ್ಷ ಮತ್ತು ಸಂಘಟನಾ ಕಾರ್ಯದರ್ಶಿ ಬಾಗವಹಿಸಿ ಸೂಕ್ತ ಸಲಹೆ ಸೂಚಯನ್ನು ನೀಡಿದರು.
ತುಂಗಮ್ಮ ಶೆಟ್ಟಿಯವರಿಗೆ ನೆರವು
ಪಡಂಗಡಿ ಗ್ರಾಮದ ತುಂಗಮ್ಮ ಶೆಟ್ಟಿಯವರ ಕಳೆದ 3 ತಿಂಗಳ ಹಿಂದೆ ಕೋಳಿ ಸಾಕಾಣಿಕೆ ಘಟಕವು ಸಂಪೂರ್ಣ ನಾಶಗೊಂಡಿದ್ದು, ಅವರಿಗೆ ಸಂಘದಿಂದ ದಾನಿಗಳ ಸಹಾಯದಿಂದ ಹಣಕಾಸಿನ ನೆರವನ್ನು ನೀಡಲಾಯಿತು.
ಸಂತೋಷ ಬೆಳಾಲು ಸ್ವಾಗತಿಸಿದರು. ಪ್ರಕಾಶ್ ಪರಾರಿ ಸಭೆಯನ್ನು ಉದ್ದೇಶೀಸಿ ಮಾತನಾಡಿ, ವಂದಿಸಿದರು.



